Join The Telegram | Join The WhatsApp |
ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯ ಎದುರಿಗೆ ಇರುವ ನಗರ ಕಾಂಗ್ರೆಸ್ ಘಟಕದ ಮುಖ್ಯ ಕಚೇರಿಯಲ್ಲಿ ಮಾಜಿ ಪ್ರಧಾನಿಗಳಾದ ಶ್ರೀಮತಿ ಇಂದಿರಾ ಗಾಂಧಿ ಅವರ 31 ನೆಯ ಪುಣ್ಯಸ್ಮರಣೆಯನ್ನು ಸರಳವಾಗಿ ಆಚರಣೆ ಮಾಡಲಾಯಿತು..
ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ, ಗೌರವ ನಮನ ಸಲ್ಲಿಸಿದ ನಂತರ ಮಾತನಾಡಿದ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ರಾಜು ಶೇಟ ಅವರು ಇಂದಿರಾ ಗಾಂಧಿ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ, ಅವರ ಅಧಿಕಾರದಲ್ಲಿ ದೇಶಕ್ಕೆ ಅನುಕೂಲ ಆಗುವ ಅತ್ಯಂತ ದಿಟ್ಟತನದ ನಿರ್ಧಾರ ಕೈಗೊಂಡು ಮಾದರಿ ಪ್ರಧಾನಿಯಾಗಿದ್ದಾರೆ ಎಂದರು..
ಹಿಂದುಳಿದವರು, ಬಡವರು, ಪರಿಶಿಷ್ಟರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ತಂದು ಆ ಸಮುದಾಯದ ಏಳಿಗೆಗೆ ಕಾರಣವಾಗಿದ್ದಾರೆ, ಅವರ ದೇಶಕ್ಕೆ ಅವರ ಆದರ್ಶ ತ್ಯಾಗ ಬಲಿದಾನ ಯಾವತ್ತಿಗೂ ಮರೆಯಬಾರದು ಎಂದರು..
ಇನ್ನು ಇದೆ ವೇಳೆ ಮಾತನಾಡಿದ ಕಾಂಗ್ರೆಸ್ಸಿನ ಯುವ ಘಟಕದ ಉಪಾಧ್ಯಕ್ಷರಾದ ಮೃಣಾಲ ಹೆಬ್ಬಾಳ್ಕರ್ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ದಿಟ್ಟ ನಿರ್ಧಾರದ ಪ್ರಧಾನಿ, ಇಡೀ ದೇಶದ ಬಲಿಷ್ಠ ಸಮುದಾಯವನ್ನು ಎದುರು ಹಾಕಿಕೊಂಡು, ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಗೆ ತಂದರು, ಅಂತವರ ದಿಟ್ಟ ದೈರ್ಯ ಭಾರತೀಯರೆಲ್ಲರೂ ಮೆಚ್ಚಲೇ ಬೇಕು ಎಂದರು ..
ಈ ವೇಳೆ ಕೆಪಿಸಿಸಿ ಸದಸ್ಯರಾದ ಪರಶುರಾಮ ವಗ್ಗಣ್ಣವರ, ಪಕ್ಷದ ಪದಾಧಿಕಾರಿಗಳಾದ ರಾವಸಾಹೇಬ ಪಾಟೀಲ, ಅನೇಕ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು..
ವರದಿ: ಪ್ರಕಾಶ ಕುರಗುಂದ
Join The Telegram | Join The WhatsApp |