Join The Telegram | Join The WhatsApp |
ವಿಜಯನಗರ: ಜಿಲ್ಲೆ ಕೂಡ್ಲಿಗಿ ಪಟ್ಟಣ, 9ನೇ ವಾರ್ಡ್ ನಲ್ಲಿ ಈಗಾಗಲೇ ತೆರವು ಗೊಳಿಸಿರುವ ಮಹಿಳೆಯರ ಸಾಮೂಹಿಕ ಶೌಚಾಲಯದ ಸ್ಥಳದಲ್ಲಿ. ಮತ್ತೆ ಶೌಚಾಲಯ ನಿರ್ಮಿಸುವುದು ಬೇಡ,ಬದಲಿಗೆ ಪಾರ್ಕ್ ಅಥವಾ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯನ್ನ ನಿರ್ಮಿಸಿ ಎಂದು. 9ನೇ ವಾರ್ಡ್ ವಾಸಿಗಳು, ನ8ರಂದು ಪಟ್ಟಣ ಪಂಚಾಯ್ತಿ ಅಧಿಕಾರಿಗೆ ಮತ್ತು ತಹಶಿಲ್ದಾರರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದ್ದಾರೆ. ಅವರು ಈ ಸಂದರ್ಭದಲ್ಲಿ ಮಾತನಾಡಿ, ತೆರವಾಗಿರುವ ಸ್ಥಳದಲ್ಲಿ ಈ ಹಿಂದೆ ಇದ್ದ ಶೌಚಾಯವು ನಿರ್ವಹಣೆ ಕಂಡಿದ್ದಿಲ್ಲ. ಕಾರಣ ತುಂಬಾ ದುರ್ವಾಸನೆಯಿಂದ ಕೂಡಿತ್ತು, ಅದರಿಂದಾಗಿ ನೆರೆ ಹೊರೆಯ ಜನರು ನರಕಯಾತನೆ ಅನುಭವಿಸುತ್ತಿದ್ದರು. ವಾರ್ಡ್ ನ ಸದಸ್ಯೆರು ಅದನ್ನು ತೆರವುಗೊಳಿಸಿರುವುದು ಸ್ವಾಗತಃವಾಗಿದ್ದು, ಆ ಸ್ಥಳದಲ್ಲಿ ಪಾರ್ಕ ಅಥವಾ ಮಕ್ಕಳಿಗೆ ಶಿಕ್ಷಣ ನೀಡುವಂತಹ ಶಲೆಯನ್ನ ನಿರ್ಮಿಸಬೇಕಿದೆ. ಈಗ ಶೌಚಾಲಯ ಬೇಕೆಂದು ಪ್ರತಿಭಟಿಸುತ್ತಿರುವವರಲ್ಲಿ, 9ನೇ ವಾರ್ಡಿನ ಯಾವೊಬ್ಬ ಮಹಿಳೆ ಇಲ್ಲ. ಅವರೆಲ್ಲಾ ಬೇರೆ ವಾರ್ಡಿನ ಮಹಿಳೆಯರಾಗಿದ್ದಾರೆ. ಅವರಿಗೆ ಅಗತ್ಯವಿದ್ದಲ್ಲಿ ಅವರ ರವರ ವಾರ್ಡನಲ್ಲಿಯೇ ನಿರ್ಮಿಸಿಕೊಳ್ಳಲಿ, 9ಅನಗತ್ಯವಾಗಿ ಶೌಚಾಲಯ ತೆರವಾಗಿರುವ ಸ್ಥಳದಲ್ಲಿ, ಕೆಲವೇ ಕೆಲವರ ಒತ್ತಾಯಕ್ಕೆ ಮಣಿದು ಪುನಃ ಶೌಚಾಲಯ ನಿರ್ಮಿಸಿದ್ದಲ್ಲಿ, ಈ ಮೂಲಕ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಉಂಟುಮಾಡಿದ್ದಲ್ಲಿ. ನಾವೇ ಅದನ್ನ ಕೆಡವುತ್ತೇವೆ ಮತ್ತು ಅಲ್ಲಿಯೇ ಪ್ರತಿಭಟನೆ ಮಾಡುತ್ತೇವೆ ಎಂದು, ಕೆಲ 9ನೇ ವಾರ್ಡಿನ ಸಾರ್ವಜನಿಕರು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಹಲವು ಮಹಿಳೆಯರು, ಹಾಗೂ ಹಲವು ಪುರುಷರು ಮತ್ತು ನಾಗರೀಕರು ಇದ್ದರು. ವರದಿ :ವಿ.ಜಿ.ವೃಷಭೇಂದ್ರ
Join The Telegram | Join The WhatsApp |