ಸೇಡಂ:- ತಾಲೂಕಿನ ರಂಜೋಳ ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ಬಾರ ಹಿಮಮ್ ದರ್ಗಾ ಪಕ್ಕದಲ್ಲಿ ಸಾರ್ವಜನಿಕರಿಗೆ ಓಡಾಡುವ ಸ್ಥಳದಲ್ಲಿ ಬಹಳ ಹದಗೆಟ್ಟಿರುವ ನೀರು ರಸ್ತೆಗೆ ಬಂದು ಸಾರ್ವಜನಿಕರಿಗೆ ತಿರುಗಾಡಲು ತುಂಬಾ ತೊಂದರೆಯಾಗಿದೆ ಎಂದು ನಿರಂಜನ್ ಬೊಂಬಾಯಿ ಅವರ ಹೇಳಿಕೆ ಮುಖಾಂತರ ನಮ್ಮ ಭಾರತ್ ವೈಭವ್ ನ್ಯೂಸ್ ವರದಿ ಮಾಡಿತ್ತು ವರದಿಗೆ ಸ್ಪಂದಿಸಿದ ಅಧಿಕಾರಿಗಳು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ವರದಿ ಮಾಡಿದ ಭಾರತ್ ವೈಭವ್ ನ್ಯೂಸ್ ತಂಡಕ್ಕೆ ಮತ್ತು ಸಾಮಾಜಿಕ ಹೋರಾಟಗಾರ ನಿರಂಜನ್ ಅವರಿಗೆ ಸ್ಥಾನಿಕರು ಧನ್ಯವಾದಗಳು ತಿಳಿಸಿದರು.
ಭಾರತ್ ವೈಭವ್ ನ್ಯೂಸ್ ಪತ್ರಿಕೆ ಮತ್ತು ಚಾನೆಲ್ ಅನೇಕ ರೀತಿಯ ಸಮಸ್ಯೆಗಳ ಕುರಿತು ವರದಿ ಮಾಡಿ ಸಮಸ್ಯೆಗೆ ಸ್ಪಂದನೆ ಸಿಗುವಂತೆ ಮಾಡುತ್ತಿದ್ದು ತುಂಬಾ ಸಂತೋಷ ತರುತ್ತಿದೆ ಎಂದು ಸ್ಥಳೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.