Join The Telegram | Join The WhatsApp |
ಮಲ್ಲಮ್ಮನ ಬೆಳವಡಿ: ಕಳೆದ ಹತ್ತು ವರ್ಷಗಳಿಂದ ಬಂದ್ ಆಗಿದ್ದ ಬೈಲಹೊಂಗಲದಿಂದ ವಾಯಾ ದೊಡವಾಡ ಮಾರ್ಗ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಸೇವೆಯನ್ನು ಪುನರಾರಂಭಿಸಲಾಗಿದೆ. ಸೋಮವಾರದಿಂದ ಈ ಸೇವೆಗೆ ಪುನಹ ಚಾಲನೆ ನೀಡಿದ್ದು ಬೈಲಹೊಂಗಲ ಘಟಕದಿಂದ ಆಗಮಿಸಿದ ನೂತನ ಬಸ್‌ಗೆ ದೊಡವಾಡ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ ಬೆಂಗಳೂರು ಪ್ರಯಾಣಕ್ಕೆ ಶುಭ ಕೋರಿದರು. ಈ ವೇಳೆ ಮಾತನಾಡಿದ ಕಾಂಗ್ರೇಸ್ ಮುಖಂಡ ಬಾಳಪ್ಪ ಅಲಸಂಧಿ, ಶಾಸಕ ಮಹಾಂತೇಶ ಕೌಜಲಗಿಯವರ ವಿಶೇಷ ಆಸಕ್ತಿ ಮತ್ತು ಪ್ರಯತ್ನದಿಂದ ವಾಯಾ ದೊಡವಾಡ ಮಾರ್ಗವಾಗಿ ಬೆಂಗಳೂರು ಬಸ್ ಸೇವೆಯನ್ನು ಪುನಾರಂಭಿಸಲಾಗಿದ್ದು ಗ್ರಾಮದಿಂದ ನೇರವಾಗಿ ಬೆಂಗಳೂರು ಹಾಗೂ ಪ್ರಮುಖ ನಗರಗಳಿಗೆ ತೆರಳಲು ಅನುಕೂಲವಾಗಲಿದೆ. ಆದ್ದರಿಂದ ಗ್ರಾಮಸ್ಥರ ಪರವಾಗಿ ಶಾಸಕರಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು. ರುದ್ರಮುನಿ ಸ್ವಾಮಿ ನೂತನ ಬಸ್‌ಗೆ ಪೂಜೆ ಕಾರ್ಯ ನೆರವೇರಿಸಿದರು. ಪ್ರಮುಖರಾದ ಸಂಕಪ್ಪ ಕೊರಕೊಪ್ಪ, ವಿಠ್ಠಲ ಕಾಳಿ, ಶಿವಶಂಕರ ಅರಳಿಮರದ, ಅಶೋಕ ಯಲಿಗಾರ, ಬಾಬು ಮುರಗೋಡ, ಸಂಗಮೇಶ ಕುರುಬಗಟ್ಟಿ, ವೀರಭದ್ರಪ್ಪ ಮಾದರ, ವಿಠ್ಠಲ ಕಲ್ಲೂರ, ಶಂಕರ ಬೆಳವಡಿ, ಮಹಾಂತೇಶ ದಾಭಿಮಠ, ಅಬ್ದುಲ ಮುಜಾವರ, ಪರುತಪ್ಪ ಸಂಗೊಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ವಾಯಾ ದೊಡವಾಡ ಮಾರ್ಗವಾಗಿ ಬೈಲಹೊಂಗಲ ಬೆಂಗಳೂರು ಮಾರ್ಗದ ಬಸ್‌ಗೆ ದೊಡವಾಡ ಗ್ರಾಮದಲ್ಲಿ ಸೋಮವಾರ ಪೂಜೆ ಸಲ್ಲಿಸಲಾಯಿತು.
ವರದಿ : ದುಂಡಪ್ಪ ಹೂಲಿ
Join The Telegram | Join The WhatsApp |