Join The Telegram | Join The WhatsApp |
ಮುದಗಲ್ಲ: ಪದೇ ಪದೇ ರಾಜ್ಯದ ಗಡಿ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ರಾಜ್ಯದ ಕೆಲ ಪುಂಡರು ಕರ್ನಾಟಕದ ಸಾರಿಗೆ ಬಸ್ ಗಳಿಗೆ ಮಸಿ ಬಳೆದಿರುವುದು ಖಂಡನೀಯವಾಗಿದೆ ಎಂದು ಎಸ್ .ಎ ನಯೀಮ್ ಕರವೇ ಅಧ್ಯಕ್ಷ ಮುದಗಲ್ಲ ಹೋಬಳಿ ಘಟಕ
ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತಿಚೆಗೆ ಮಹಾರಾಷ್ಟ್ರದ ದೌಂಡ ಎಂಬಲ್ಲಿ ನಮ್ಮ ರಾಜ್ಯದ ಸಾರಿಗೆ ಬಸ್ ಗೆ ಮಸಿ ಬಳೆಯುವ ಮೂಲಕ ಮತ್ತೊಮ್ಮೆ ಕನ್ನಡಿಗರು ಕೆರಳುವಂತೆ ಮಾಡಿದ್ದಾರೆ, ಕಲಹ ರಾಜ್ಯದ ಸೊಲ್ಲಾಪುರ, ದುಧನಿ, ಉಮ್ಮರ್ಗಾ, ತುಳಜಾಪುರ , ಲಾತೂರ ಮತ್ತಿತರ ಪ್ರಮುಖ ನಗರಗಳಿಗೆ ನಮ್ಮ ರಾಜ್ಯದಿಂದಲೇ ವಾಹನಗಳು ಸಂಚರಿಸುತ್ತವೆ ಎಂಬುದು ಮರೆಯದಿರಿ,
ಕನ್ನಡಿಗರು ಶಾಂತಿ, ಸೌಹಾರ್ದತೆಯಿಂದಲೇ ಚಿರಪರಿಚಿತರಾಗಿದ್ದಾರೆ, ಹಾಗಂತ ಪದೇ ಪದೇ ರಾಜ್ಯದ ಗಡಿ ಮತ್ತು ಜನರ ತಂಟೆಗೆ ಬಂದರೆ ಸುಮ್ಮನಿರಲ್ಲ, ನಮಗೂ ಕೈಗಳಿವೆ, ನಮ್ಮಲ್ಲೂ ಮಸಿ ಇದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ವರದಿ: ಮಂಜುನಾಥ ಕುಂಬಾರ
Join The Telegram | Join The WhatsApp |