Join The Telegram | Join The WhatsApp |
ಬೆಳಗಾವಿ: ಶುಕ್ರವಾರ ಸಂಜೆ ನಗರದ ಸಮೀಪ ಇರುವ ಸುಳೆಭಾವಿ ಗ್ರಾಮದಲ್ಲಿ ಜನರ ಬ್ರಹತ್ ಜಾತ್ರೆಯೇ ನೆರೆದಿತ್ತು, ಎಲ್ಲಿ ನೋಡಿದರೂ ಅಲ್ಲಿ ಜನಗಳನ್ನು ಕರೆತಂದ ವಾಹನಗಳು, ಹಾಗೂ ಅಸಂಖ್ಯಾತ ಸಾರ್ವಜನಿಕರಿಂದ ಇಡೀ ಗ್ರಾಮವೇ ಹೊಸ ಕಳೆಯಿಂದ, ಹಬ್ಬದ ವಾತಾವರಣದಂತೆ ಕಂಗೊಳಿಸುತ್ತಿತ್ತು..
ಮುಂಬರುವ ವಿಧಾನ ಸಭೆಯ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲೆ ಬೇಕೆಂದು ಮಾಂಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಅವರ ಅವರ ಅಭಿಮಾನಿಗಳು ಪಣ ತೊಟ್ಟಿರುವ ರೀತಿಯಲ್ಲಿ ಈ ಸಮಾವೇಶದ ತಯಾರಿಯಾಗಿತ್ತು…
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಹಮ್ಮಿಕೊಂಡಿರುವ ಈ ಅಭಿಮಾನಿಗಳ ಅಭಿನಂದನಾ ಸಮಾವೇಶಕ್ಕೆ ಸಾಗರೋಪಾದಿಯಲ್ಲಿ ಜನರು ಬಂದಿದ್ದು ನೋಡಿದರೆ, ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಶಕ್ತಿ ಎಷ್ಟು ಎಂದು ಮತ್ತೊಮ್ಮೆ ಸಾಭಿತಾಗುವ ರೀತಿಯಲ್ಲಿ ಜನಜಾತ್ರೆ ಸೇರಿತ್ತು..
ಇನ್ನು ಕಾರ್ಯಕ್ರಮ ಶುರುವಾಗುವ ಮೊದಲೇ ಈ ಉತ್ಸಾಹ ಅಭಿಮಾನಿಗಳಲ್ಲಿ ಮೂಡಿದ್ದು ಇದು ಮುಂದಿನ ಹೊಸ ಇತಿಹಾಸಕ್ಕೆ ನಾಂದಿ ಎಂಬಂತೆ ಕಾಣುತ್ತಿತ್ತು…
ಸಮಾವೇಶಕ್ಕೆ ಅಭಿಮಾನಿಗಳ ಸಿಳ್ಳೆ, ಚಪ್ಪಾಳೆ, ಜೈಕಾರದ ಮೂಲಕ ರಮೇಶ ಜಾರಕಿಹೊಳಿ ಅವರ ಆಗಮನ ಆದ ನಂತರ ನೆರೆದಿದ್ದ ಜನರ ಹರ್ಷ ಇಮ್ಮಡಿಯಾಯಿತು…
ಗಣ್ಯರ ಸಮ್ಮುಖದಲ್ಲಿ ಸಸಿಗೆ ನೀರು ಹಾಕುವ ಮೂಲಕ ಸಮಾವೇಶದ ಉದ್ಘಾಟನೆ ಆಯಿತು.. ನಂತರ ವೇದಿಕೆಯಲ್ಲಿ ಹಲವಾರು ಸಂಘ, ಸಮುದಾಯ, ಪಕ್ಷಗಳ ಬೆಂಬಲಿಗರಿಂದ ರಮೇಶ ಜಾರಕಿಹೊಳಿ ಸತ್ಕರಿಸಲಾಯಿತು..
ವೇದಿಕೆ ಮೇಲೆ ಕೆಲವು ಜಾರಕಿಹೊಳಿ ಬೆಂಬಲಿಗರು ಮಾತನಾಡಿ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಯಾವ ರೀತಿ, ಯಾರಿಂದ ಅಧಿಕಾರ ಪಡೆಯಿತು ಎಂದು, ಕಟುವಾಗಿ ಹೇಳಿ, ಪ್ರಸ್ತುತ ಶಾಸಕರ ನಡೆ, ಅವರ ದುರಾಡಳಿತ, ಭ್ರಷ್ಟಾಚಾರಗಳ ಬಗ್ಗೆ ತೀವ್ರ ಆಕ್ರೋಶದಿಂದ ಮಾತನಾಡಿದರು…
ಇನ್ನು ವೇದಿಕೆ ಮೇಲೆ ಮಾತನಾಡಿದ ರಮೇಶ ಜಾರಕಿಹೊಳಿ ಅವರು ಗ್ರಾಮೀಣ ಕ್ಷೇತ್ರದ ಶಾಸಕಿಯ ದುರಾಡಳಿತವನ್ನು ಹಾಗೂ ಕ್ಷೇತ್ರದಲ್ಲಿನ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿ, ಇಂತಾ ಶಾಸಕರು ಇಡೀ ರಾಜಕೀಯಕ್ಕೆ ಅವಮಾನ ಇವರನ್ನು ಕಿತ್ತೊಗೆದು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದೆ ನಮ್ಮ ಗುರಿ ಎಂದು ಗುಡುಗಿದರು….
ಇದೇ ಸಮಯದಲ್ಲಿ ಗ್ರಾಮೀಣ ಕ್ಷೇತ್ರದ ಸ್ಥಳೀಯ ಮುಖಂಡರು ಹಾಗೂ ಮತದಾರರು ಸಹ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಕ್ಷೇತ್ರದ ಶಾಸಕರ ಬಗ್ಗು ನಕಾರಾತ್ಮಕವಾಗಿ ಮಾತನಾಡಿ, ಸಾಹುಕಾರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಗೆಲ್ಲಿಸುತ್ತೆವೆ ಎಂಬ ಸಂದೇಶ ನೀಡಿದರು..
ಇನ್ನು ಈ ಅಭಿಮಾನದ ಸಮಾವೇಶಕ್ಕೆ ಗ್ರಾಮೀಣ ಕ್ಷೇತ್ರದ ಬಿಜೆಪಿಯ ಮುಖಂಡ ಹಾಗೂ ಹಿಂಡಲಗಾ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ನಾಗೇಶ್ ಮಂಡೂಳ್ಕರ್, ಪಕ್ಷಾತೀತವಾಗಿ ಜಿಲ್ಲಾ, ತಾಲ್ಲೂಕು, ಎಲ್ಲಾ ಪಂಚಾಯತಿಗಳ ಅಧ್ಯಕ್ಷ ಹಾಗೂ ಸದಸ್ಯರು, ನಾನಪ್ಪ ಅಣ್ಣಪ್ಪ ನಾಯಿಕ, ಶೇಖರ, ಮಹೇಶ, ಹಾಗೂ ಸಾವಿರಾರು ಅಭಿಮಾನಿ ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.
ವರದಿ ಪ್ರಕಾಶ ಕುರಗುಂದ..
Join The Telegram | Join The WhatsApp |