This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಬ್ರಿಟಿಷರಿಗೆ ನಡುಕ ಹುಟ್ಟಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ…

Join The Telegram Join The WhatsApp

ಮುದಗಲ್ಲ : ರಾಯಣ್ಣನ ಜನ್ಮದಿನ ಹಾಗೂ ಪುಣ್ಯತಿಥಿಯನ್ನು ಸ್ಮರಣೋತ್ಸವ ಸಮಿತಿಯಿಂದ ಪ್ರತಿವರ್ಷ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಮೂಲಕ ರಾಯಣ್ಣನ ಹೋರಾಟ, ತ್ಯಾಗ, ಶೌರ್ಯದ ಬಗ್ಗೆ ಇಂದಿನ ಯುವಕರಿಗೆ ತಿಳಿಸುವ ಯತ್ನ ನಡೆದಿದೆ. ಅಲ್ಲದೇ ಸ್ವಾತಂತ್ರ್ಯ ದಿನದಂದು ಹಾಗೂ ಗಣರಾಜ್ಯೋತ್ಸವದಂದು ಮುದಗಲ್ಲ ಕನ್ನಾಪೂರಹಟ್ಟಿ ನಲ್ಲಿ ಸಂಗೋಳ್ಳಿ ರಾಯಣ್ಣ ನಾಮಫಲಕಕ್ಕೆ ವಿಶೇಷ ಪೂಜೆ ಊರಿನ ಗಣ್ಯರಿಂದ ನಡೆಯುತ್ತದೆ.

ಈ ಸಂದರ್ಭದಲ್ಲಿ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಮುದಗಲ್ಲ ಘಟಕದ ಅಧ್ಯಕ್ಷ ರಾದ ಚನ್ನಬಸವ ಅವರು ಮಾತನಾಡಿದ ಶೌರ್ಯ, ಪರಾಕ್ರಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಯೊಬ್ಬರಿಗೂ ಸ್ಪೂರ್ತಿಯ ಚಿಲುಮೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾ ದೇಶಪ್ರೇಮಿ‌ ಕರುನಾಡಲ್ಲಿ ಬ್ರಿಟಿಷರನ್ನು ನಡುಗಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಲಿದಾನ ದಿನವಿಂದು. ಗಣರಾಜ್ಯೋತ್ಸವದ ದಿನದಂದು ಇಡೀ ದೇಶದ ಜನರೇ ರಾಯಣ್ಣನನ್ನು ಸ್ಮರಿಸುತ್ತಾರೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು..

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರಾದ ಪರಮಯ್ಯ , ಭೀಮಯ್ಯ, ಚನ್ನಬಸವ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಮುದಗಲ್ಲ ಘಟಕದ ಅಧ್ಯಕ್ಷರು, ಹನುಮಂತ ಮಳಿ ಇತರರು ಉಪಸ್ಥಿತರಿದ್ದರು.

ವರದಿ: ಮಂಜುನಾಥ ಕುಂಬಾರ


Join The Telegram Join The WhatsApp
Bharath Vaibhav
the authorBharath Vaibhav

Leave a Reply