ರಾಯಬಾಗ
:
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂತೋಷ ಯಳಗೂಡ (30) ಯೋಧ ಅನಾರೋಗದಿಂದ. ಬಳಲುತ್ತಿದ್ದು,
ದೇಹಲಿಯ ಆರ್ಮಿಯ RR ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೋನ್ನೆ ರಾತ್ರಿ 3 ಘಂಟೆ ಸುಮಾರಿಗೆ ಮೃತಪಟ್ಟಿದ್ದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸಿದ್ದಾಪೂರ ಗ್ರಾಮದ ಯೋದ ಕರ್ತವ್ಯದ ಮೇಲೆ ಇದ್ದಾಗಲೆ ಮೃತಪಟ್ಟಿದ್ದು ಅವರು ದೇಹಲಿಯ ಸಿಗ್ನಲ್ ರೇಜಮೆಂಟ್ ಘಟಕದಲ್ಲಿ ಸೈನಿಕ ಸೇವೆ ಸಲ್ಲಿಸುತ್ತಿದ್ದರು,
ಯೋಧನ ಮೃತ ದೇಹವನ್ನು ರಾಯಬಾಗ ತಾಲೂಕೀನ ಯಲ್ಲಪಾರಟ್ಟಿ ಗ್ರಾಮದ ಅರಣ್ಯ ಸಿದ್ದೇಶ್ವರ ದ್ವಾರಬಾಗಿಲಿನಿಂದ ತೆರೆದ ವಾಹನದಲ್ಲಿ ಯೋದನ ಪಾರ್ಥಿವ ಶರೀದ ಮೆರವಣಿಗೆ ಮೂಲಕ ಸ್ವ ಗ್ರಾಮ ಸಿದ್ದಾಪೂರಕ್ಕೆ ಆಗಮಿಸಿತು ಮೆರವಣಿಗೆ ವೇಳೆ ರಸ್ತೆ ಬದಿಯಲ್ಲಿ ಗ್ರಾಮಸ್ಥರು ಶಾಲಾ ಮಕ್ಕಳು ಪುಷ್ಪಾರ್ಚನೆ ಮಾಡಿದರು,
ಗ್ರಾಮದ ಮದ್ಯಬಾಗದ ಆವರಣದಲ್ಲಿ ಶಾಮಿಯಾಲಿನಲ್ಲಿ ಇಟ್ಟ ಸಂತೋಷನ ಪಾರ್ಥವ ಶರಿರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದ ಜನರು,
ಈ ಸಂದರ್ಭದಲ್ಲಿ ಕುಡಚಿ ಮತ ಕ್ಷೇತ್ರದ ಶಾಸಕರು ಮಹೇಂದ್ರ ತಮ್ಮನವರ ಅವರು ಯೋಧನ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು, ಇನ್ನೂ ಹಲವಾರು ಗಣ್ಯಮಾನ್ಯರು ಯೋದನ ಪಾರ್ಥಿವ ಶರೀರದ ದರ್ಶನ ಪಡೆದು ನಮನ ಸಲ್ಲಿಸಿದರು,
ಇವರ ಅಂತ್ಯಕ್ರಿಯೆ ಸ್ವ ಗ್ರಾಮದಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ನೆರವೇರಿಸಲಾಯಿ
ಸಿದ್ದಾಪೂರ ಗ್ರಾಮದಲ್ಲಿ ಇವತ್ತು ನೀರವ ಮೌನ ಆವರಿಸಿತ್ತು, ಕಳೆದ ಎಂಟು ವರ್ಷಗಳಿಂದ ದೇಶದ ವಿವಿದ ಕಡೆ ಸೇವೆ ಸಲ್ಲಿಸ ಯೋದ ಸಂತೋಷ, ಯಳಗೂಡ,
ಮೃತ ಯೋದನಿಗೆ ಹೆಂಡತಿ ಏಳುತಿಂಗಳ ಗಂಡು ಮಗು ಇದ್ದು ಎರಡು ಜನ ಸಹೋದರ ಇದ್ದು ಇನೋರ್ವ ಸಹೋದರ ಭಾರತಿಯ ಸೈನ್ಯದಲ್ಲಿ ಸೇವೆಸಲ್ಲಿಸುತ್ತಿರುವನ್ನು,
ಮೃತ ಯೋದನ ತಂದೆ ತಾಯಿ ಮಡದಿಯ ಹಾಗೂ ಸಂಬಂಧಿಕರ ಆಕ್ರಂದನ ಮೂಗಿಲು ಮುಟ್ಟಿತ್ತು.
ಸ್ವ ಗ್ರಾಮವಾದ ಸಿದ್ದಾಪೂರ ದಲ್ಲಿರೂವ ಮನೆಯ ಹಿಂದೆ ಜಮೀನಿನಲ್ಲಿ ಯೋದ ಸಂತೋಷ ಯಳಗೂಡ ಪಂಚಭೂತಗಳಲ್ಲಿ ಲಿನನಾದನು
ವರದಿ ರಾಜು ಮುಂಡೆ