Join The Telegram | Join The WhatsApp |
ಅಥಣಿ: ಕ್ಷೇತ್ರದ ಜನರ ಭರವಸೆಗಳನ್ನ ಬಹುತೇಕ ಈಡೆರಿಸಲಾಗಿದೆ. ಬಹು ನಿರಿಕ್ಷೀತ ಮುಳುಗಡೆ ಪ್ರದೇಶದಿಂದ ಸಪ್ತಸಾಗರ ಗ್ರಾಮವನ್ನು ಅತಿ ಶೀಘ್ರವಾಗಿ ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಶಾಸಕ ಮಹೇಶ ಕುಮಠಳ್ಳಿ ಭರವಸೆ ನೀಡಿದರು. ₹2.74 ಕೋಟಿಯಲ್ಲಿ ಕೈಗೆತ್ತಿಕೊಂಡ ತಾಲ್ಲೂಕಿನ ತೀರ್ಥ ಗ್ರಾಮದಿಂದ ಚಿಕ್ಕೂಡವರೆಗಿನ ರಸ್ತೆ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಈಗಾಗಾಲೇ ಮನೆ ಬಿದ್ದ 70ರಷ್ಟು ಮಂದಿಗೆ ಹಣ ಸಂದಾಯವಾಗಿದೆ. ಉಳಿದವರ ಸಮಸ್ಯೆಯನ್ನೂ ಜನವರಿಯೊಳಗೆ ಬಗೆಹರಿಸಲು ತಹಶೀಲ್ದಾರ್‌ಗೆ ತೀಳಿಸಲಾಗಿದೆ’ ಎಂದರು. ‘2018ರಿಂದ ಇಲ್ಲಿಯವರೆಗೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾಮಗಾರಿ ಮಾಡಿದ್ದೇನೆ. ಇನ್ನೂ ಸಾಕಷ್ಟು ಕಾರ್ಯಗಳು ಆಗಬೇಕಿದೆ. ಆದಷ್ಟು ಬೇಗ ಅವುಗಳಿಗೂ ಚಾಲನೆ ನಿಡಲಾಗುವುದು’ ಎಂದರು. ಮುಖಂಡರಾದ ಅಶೋಕ ಐಗಳಿ, ಸಂಜಯ ನಾಡಗೌಡ, ಮಲ್ಲಪ್ಪ ಹಂಚಿನಾಳ, ಪ್ರಕಾಶ ಜೋಶಿ, ಯಮನಪ್ಪ ಬೊಮ್ಮನ್ನವರ, ಅಶೋಕ ಬಡಿಗೇರ, ವಿಠಲ ಪೂಜಾರಿ, ಶಂಕರ ಕೋಳೆಕರ, ಹಾರೂನ ಮುಲ್ಲಾ, ಪರಶುರಾಮ ಕೋಳೆಕರ, ಅಣ್ಣಾಸಾಬ ಪಾಟೀಲ, ಪ್ರಕಾಶ ಚನ್ನಣ್ಣವರ, ಬಾಬಾಲಾಲ್ ನದಾಫ, ವಿಜಯ ಕಾಂಬಳೆ, ರಾಜು ಪಾಟೀಲ ಇದ್ದರು.
Join The Telegram | Join The WhatsApp |