Join The Telegram | Join The WhatsApp |
ಕಲಘಟಗಿ :ಪ.ಪ ಜಾತಿ, ಪ.ಪಂ ಸಮುದಾಯಗಳ ಕುಂದು ಕೊರತೆಗಳನ್ನು ತತಕ್ಷಣದಲ್ಲಿ ನಿವಾರಿಸಿ ಪರಿಹಾರ ನೀಡಲಾಗುವುದು ಎಂದು ಕಲಘಟಗಿ ಸಿ.ಪಿ.ಐ ಶ್ರೀಶೈಲ ಕೌಜಲಗಿ ಮಾತನಾಡಿದರು.
ಪೊಲೀಸ ಠಾಣಾ ಆವರಣದಲ್ಲಿ ಆಯೋಜಿಸಲಾಗಿದ್ದ ಪ.ಪ ಜಾತಿ,ಪ.ಪಂಗಡಗಳ ಕುಂದು ಕೊರತೆ ಸಭೆಯನ್ನುದ್ದೇಶಿಸಿ ಮಾತನಾಡುತ್ತ ನಮ್ಮ ವ್ಯಾಪ್ತಿಗೆ ಬರುವ ಸಮುದಾಯಗಳ ಮೇಲಿನ ದೌರ್ಜನ್ಯ, ಹಕ್ಕುಗಳ ರಕ್ಷಣೆಗಾಗಿ ನಮ್ಮ ಇಲಾಖೆ ಸದಾ ಸಿದ್ದವಾಗಿದ್ದು ತಮಗೆ ತೊಂದರೆ ಆದಲ್ಲಿ ಲಿಖಿತ ದೂರಗಳ ಮೂಲಕ ತಿಳಿಸಿದ್ದಲ್ಲಿ ತತಕ್ಷಣದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮಾಜದ ಮುಖಂಡ ಬಸವರಾಜ ಮಾದರ ಮಾತನಾಡಿ ಕಸಾಯಿಖಾನಾ ಮಾಲಿಕರು ತ್ಯಾಜ್ಯಗಳನ್ನು ಪಟ್ಟಣದ ರಸ್ತೆ ಪಕ್ಕದಲ್ಲಿ ತಂದು ಸುರಿಯುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು ಸಂಭoದಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ.ಪ ಜಾತಿ, ಪ.ಪಂಗಡಗಳ ಅನುದಾನವನ್ನು ಸಕಾಲದಲ್ಲಿ ಇಲಾಖೆಗಳು ಬಳಕೆ ಮಾಡಿ ಸಮುದಾಯಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮಂಗಲಪ್ಪ ಲಮಾಣಿ ವಿನಂತಿಸಿದರು.
ಸಭೆಯಲ್ಲಿ ಪಿ.ಎಸ್.ಐ.ಉಮಾದೇವಿ .ಸಿ ಸಮುದಾಯದ ಮುಖಂಡರಾದ ಬಸವರಾಜ ಕಟ್ಟಿಮನಿ, ಮಂಜುನಾಥ ಮಾದರ,ಶಿವಾಜಿ ವಡ್ಡರ,ಯಲ್ಲಪ್ಪ ಮೇಲಿನಮನಿ,ಚಂದ್ರು ಮಾದರ,ಶಶಿಧರ ಕಟ್ಟಿಮನಿ, ,ಮಾಲಾ ತುರಿಹಾಳ,ಸತೀಶ ಮಾದರ,ಗೋಪಾಲ ದೊಡಮನಿ,ದ್ಯಾಮಣ್ಣ ಮಾದರ,ವಾಸು ಲಮಾಣಿ ಇದ್ದರು.
ವರದಿ :ಶಶಿಕುಮಾರ ಕಲಘಟಗಿ
Join The Telegram | Join The WhatsApp |