ಬಾದಾಮಿ:- ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ. ಸರಕಾರದ ಆದೇಶದ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯನ್ನು ತಾಲೂಕಾ ದಂಡಾಧಿಕಾರಿಗಳು ಜೆ. ಬಿ. ಮಜ್ಜಗಿ ಹಾಗೂ ಪೊಲೀಸ್ ಇಲಾಖೆಯ ಕ್ರೈಮ್ ಪಿ. ಎಸ್. ಐ. ವಿಠ್ಠಲ್ ನಾಹೀಕ್ ಅವರ ನೇತೃತ್ವದಲ್ಲಿ ಸಂಬಂಧ ಪಟ್ಟ ಎಲ್ಲಾ ಇಲಾಖೆಗಳ ಮುಖ್ಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆಯನ್ನು ನಡೆಸಿದರು.
ಸಮಾಜದ ಮುಖಂಡರು ತಾಲೂಕಿನಲ್ಲಿ ನಮ್ಮ ಸಮಾಜದವರಿಗೆ ಸರಕಾರ ನೀಡಿದ ಹಾಗೂ ನೀಡುತ್ತಿರುವ ಸೌಲಭ್ಯಗಳನ್ನು ಒದಗಿಸಬೇಕು.ಬಾದಾಮಿ ತಾಲೂಕಿನ ಸುತ್ತಳ್ಳಿಯ ಅನೇಕ ರೀತಿಯ ಸಮಸ್ಯೆಗಳನ್ನು ತಿಳಿಸಿದರು.
ಮುಖ್ಯವಾಗಿ ಅರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸೇರಿದಂತೆ ಸಾರಿಗೆ ಇಲಾಖೆ,ಸರಿಯಾಗಿ ಕಾರ್ಯ ನಿರ್ವಸುತ್ತಿಲ್ಲ ಎಂದು ತಿಳಿಸಿದರು.ನಂತರ ಈ ಸಮಸ್ಯೆಗಳು ಮುಂಬರುವ ಸಭೆಯಲ್ಲಿ ಪರಿಹಾರ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಕೂಡಾ ಸಭೆಗೆ ಆಗಮಿಸಿದ್ದರು.ಸಮಸ್ಯೆ ಕುರಿತು ತಿಳಿಸಿದರು. ನಂತರ ನಮಗೂ ಕೂಡಾ ಮಾಹಿತಿ ತಿಳಿಸಬೇಕು ಎಂದು ಹೇಳಿದರು. ಅಧಿಕಾರಿಗಳು ಖಂಡಿತಾ ತಿಳಿಸುತ್ತೇವೆ ಎಂದು ಹೇಳಿದರು.
ಸಂಬಂಧ ಪಟ್ಟ ಎಲ್ಲಾ ಇಲಾಖೆಗಳಿಗೆ ಬಾದಾಮಿ ತಹಸೀಲ್ದಾರ್ ಅವರು ಅಧಿಕಾರಿಗಳಿಗೆ ಇನ್ನು ಮುಂದೆ ಯಾವುದೇ ರೀತಿಯ ಸಮಸ್ಯೆಗಳು ಆಗದ ರೀತಿ ತಾವುಗಳು ನೋಡಿಕೊಳ್ಳಬೇಕು ಎಂದು ಈ ಸಭೆಯನ್ನು ಯಾವುದೇ ರೀತಿಯ ತಂಟೆ ತಕರಾರು ಬಾರದ ರೀತಿ ಸರಳತೆಯ ಸಭೆ ನಡೆಯಿತು
ಎಲ್ಲರಿಗೂ ಧನ್ಯವಾದಗಳು ಎಂದು ತಹಸೀಲ್ದಾರ್ ಅವರು ತಿಳಿಸಿದರು.ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮಾಜದ ಪ್ರಮುಖ ಮುಖಂಡರು, ಸಂಬಂಧಿತ ಸಂಘಟನೆಗಳ ಮುಖ್ಯಸ್ಥರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ : ಕೆ. ಎಚ್. ಶಾಂತಗೇರಿ