ಗೋಕಾಕ : ಬೆಳ್ಳಂ ಬೆಳಿಗ್ಗೆ 3ರಿಂದ 4 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದನ್ನು ನೋಡಿ ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಿ 700 ಗ್ರಾಂ ಚಿನ್ನ ದೋಚಿ ಪರಾರಿಯಾದ ಘಟನೆ ಗೋಕಾಕ ನಗರದಲ್ಲಿ ನಡೆದಿದೆ.
ಗೋಕಾಕ ನಗರದ ವಿದ್ಯಾನಗರ ನಗರದಲ್ಲಿನ ವ್ಯಾಪಾರಸ್ಥ ಶ್ರೀರಾಮ ಚೌದರಿಯವರ ಮನೆಯಲ್ಲಿಟ್ಟಿದ್ದ 700 ಗ್ರಾಂ ಚಿನ್ನ ಕಳ್ಳತನ ಆಗಿದ್ದು ಸುದ್ದಿ ತಿಳಿದ ನಗರ ಠಾಣೆಯ CPI ಸುರೇಶಬಾಬು ಬಂಡಿವಡ್ಡರ ಮತ್ತು ನಗರ ಪಿ,ಎಸ್,ಐ, ಕೆ.ವಾಲಿಕಾರ ಇವರು ಸ್ಥಳಕ್ಕೆ ದೌಡಾಯಿಸಿ ಪರಿಶಿಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಜಾಲ ಬಿಸಿದ್ದಾರೆ.
ಇನ್ನು ಶ್ರೀರಾಮ ಚೌದರಿ ಇವರು ಬೇರೆ ಊರಿಗೆ ಹೊಗಿದ್ದನ್ನು ಗಮನಿಸಿದ ಕಳ್ಳರು ಮೊದಲು ಬೇರೆಯೊಬ್ಬರ ಮನೆಗೆ ಕಳ್ಳತನಕ್ಕೆ ಹೊದಾಗ ಅಲ್ಲಿಎನು ಸಿಗದ ಕಾರಣ ಪಕ್ಕದಲ್ಲಿದ್ದ ಶ್ರೀರಾಮ ಚೌದರಿ ಇವರ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಮನೆಯ ಬಾಗಿಲಿನ ಬೀಗ ಮುರಿದು 700 ಗ್ರಾಂ ಚಿನ್ನ ಕಳ್ಳತನ ಮಾಡಿದ್ದು ತಿಳಿದು ಬಂದಿದೆ.
ಕಳ್ಳತನಕ್ಕೆ ಮನೆಯ ಮಾಲಿಕ ಶ್ರೀರಾಮ ಚೌದರಿಯವರ ನಿರ್ಲಕ್ಷವೆ ಕಾರಣ ಅಂತ ಅನ್ನಬಹುದು ಯಾಕೆಂದರೆ ದಿನಂಪ್ರತಿ ನಗರ ಪೋಲಿಸರು ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ,ಇನ್ನೂಳಿದವರಿಗೂ ಕೂಡ ಸಿಸಿ ಟಿವಿ ಅಳವಡಿಸಲು,ಪರಸ್ಥಳಗಳಿಗೆ ಹೊಗುವಾಗ ಸ್ಥಳಿಯ ಪೋಲಿಸ ಠಾಣೆಗೆ ತಿಳಿಸಲು ತಿಳಿಸಿದರು ಸಹ ಸಾರ್ವಜನಿಕರು ನಿರ್ಲಕ್ಷ ತೊರುತ್ತಿರುವದರಿಂದ ಇಂತಹ ಕಳ್ಳತನ ಆಗುತ್ತಲಿವೆ,ಅಷ್ಟೆ ಅಲ್ಲ ಸಿಸಿ ಟಿವಿ ಅಳವಡಿಸದಿರುವುದು ಕಳ್ಳತನ ಮಾಡಲಿಕ್ಕೆ ಸಹಕಾರಿಯಾಗುತ್ತಲಿವೆ..
ಇದರ ಜೊತೆಯಲ್ಲಿ ಜನನಿ ಬೀಡ ಪ್ರದೇಶವಾದ ವಿದ್ಯಾನಗರದಲ್ಲಿ ಮನೆಯಲ್ಲಿಟ್ಟಿದ್ದ ಅಪಾರ ಪ್ರಮಾಣದ ಚಿನ್ನ ಕಳ್ಳತನವಾಗಿದ್ದು ಸ್ಥಳಿಯರು ಈ ಕಳ್ಳತನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.ಇನ್ನಾದರೂ ಸಾರ್ವಜನಿಕರು ಸಿಸಿಟಿವಿ ಅಳವಡಿಸಿ ಕಾನೂನಿಗೆ ಸಹಕರಿಸಬೇಕಾಗಿದೆ,ಆಗ ಮಾತ್ರ ಕಳ್ಳತನಕ್ಕೆ ಬ್ರೇಕ್ ಹಾಕಲು ಸಾದ್ಯ,
ವರದಿ:ಮನೋಹರ ಮೇಗೇರಿ