Join The Telegram | Join The WhatsApp |
ಹುಬ್ಬಳ್ಳಿ :- ಅಣ್ಣಿಗೇರಿ ತಾಲ್ಲೂಕಿನ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ ಅಣ್ಣಿಗೇರಿ ತಾಲ್ಲೂಕಿನ ಶೆಲವಡಿ ಗ್ರಾಮದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನವಲಗುಂದ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ವಕೀಲರಾದ ಪ್ರಕಾಶ ಅಂಗಡಿ ಮಾತನಾಡುತ್ತಾ ಯುವ ಕವಿಗಳಿಗೆ ಪ್ರೋತ್ಸಾಹ ಮತ್ತು ಮಹಿಳಾ ಗೋಷ್ಠಿ, ರೈತ ಗೋಷ್ಠಿ, ಹೀಗೆ ಅನೇಕ ಗೋಷ್ಠಿಗಳ ಮೂಲಕ ಸಾಹಿತ್ಯ ಸಮ್ಮೇಳನ ಯಶಸ್ಸು ಆಗಲು ಸಹಕಾರಿಯಾಗುತ್ತದೆ. ಎಂದರಲ್ಲದೆ
ಸಾಹಿತ್ಯ ಸಮ್ಮೇಳನವು ಸಂಭ್ರಮದ ವಾತಾವರಣ ನಿರ್ಮಾಣ ಆಗಬೇಕು ಮತ್ತು ಕನ್ನಡ ಭಾಷೆಯ ಬೆಳೆಸುವುದು ಮತ್ತು ಕನ್ನಡದ ಅಸ್ಮೀತೆಯನ್ನು ನಾವೆಲ್ಲರೂ ಈಂತಹ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಗಳಾಗಬೇಕು ಅಂದಾಗ ಮಾತ್ರ ಸಮ್ಮೇಳನ ಸಾರ್ಥಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಡಾ,ಎ ಸಿ ವಾಲಿ ಮಹಾರಜರು, ಸರ್ವಾಧ್ಯಕ್ಷರು ಶ್ರೀಶೈಲ ಹುದ್ದಾರ,ಲಿಂಗರಾಜ ಅಂಗಡಿ ,ರವಿರಾಜ ವರ್ಣೇಕರ,ಸೇರಿದಂತೆ ಅನೇಕರು ಗಣ್ಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.
ಸುಧೀರ್ ಕುಲಕರ್ಣಿ
Join The Telegram | Join The WhatsApp |