Join The Telegram | Join The WhatsApp |
ಬೆಳಗಾವಿ: ಬೆಳಗಾವಿಯ ವೈಭವ ನಗರದಲ್ಲಿ ಇರುವ ಬಾಲ ನಟ ಹಾಗೂ ಅಂತರಾಷ್ಟ್ರೀಯ ಮಾಡೆಲ್ ಆಯುಷ್ ಹೊಸಕೋಟಿ ಅವರ ಮನೆಗೆ ಹಲವಾರು ಕಲಾವಿದರು ಆಗಮಿಸಿ ಆಯುಷ್ ಹೊಸಕೋಟಿ ಅವರಿಗೆ ಶುಭ ಕೋರಿದರು.
ಆಯುಷ ಹೊಸಕೋಟಿ ಈ ವರ್ಷದ ಕೊನೆಯಲ್ಲಿ ಥಾಯ್ಲೆಂಡ್ ಹಾಗೂ ಮಲೇರಿಯಾದಲ್ಲಿ ನಡೆಯುವ ಕಿಡ್ಸ್ ಸ್ಟಾರ್ ಶೋದಲ್ಲಿ ಬಾಗ ವಹಿಸಲಿರುವ ಈತ, ಭಾರತವನ್ನು ಪ್ರತಿನಿಧಿಸಲಿದ್ದಾನೆ.
ಇಂದು ಆಯುಷ ಹೊಸಕೋಟಿ ಅವರ ಮನೆಯಲ್ಲಿ ದಾನಮ್ಮ ದೇವಿ ಪೂಜಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮಕ್ಕೆ ಹಿರಿಯ ಕಲಾವಿದೆ ರಾಧಾ ರಾಮಚಂದ್ರ ಅವರ ಆಗಮಿಸಿ, ಆಯುಷ ಹೊಸಕೋಟಿ ಮಲೆಷ್ಯಾ ಹಾಗೂ ಥೈಲ್ಯಾಂಡ್ ನಲ್ಲಿ ನಡೆಯುವ ಕಿಡ್ಸ ಸ್ಟಾರ್ ಇಂಟರ್ನ್ಯಾಷನಲ್ ಸ್ಪರ್ಧೆಗೆ ತೆರಳುತ್ತಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ಆಯುಷ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಬೆಳಗಾವಿಯಿಂದ ದೇಶವನ್ನೇ ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಡಾ. ರಾಜಕುಮಾರ ಅವರ ಮೊಮ್ಮಗಳು ಸರಸ್ವತಿ ಅವರು ಮಾತನಾಡಿ, ಉತ್ತರ ಕರ್ನಾಟಕದ ಪ್ರತಿಭೆ ಎಲ್ಲಡೆ ಹೆಸರು ಗಳಿಸುತ್ತಿರುವು ಹೆಮ್ಮೆಯ ವಿಚಾರ, ಹೀಗೆ ಅವರ ಸಾಧನೆ ಮುಂದು ವರೆಯಲಿ ಎಂದು ತಿಳಿಸಿದರು.
ವರದಿ : ಪ್ರಕಾಶ ಕುರಗುಂದ
Join The Telegram | Join The WhatsApp |