Join The Telegram | Join The WhatsApp |
ಕಲಘಟಗಿ: ಇಂದಿನ ದಿನಮಾನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವಕರು ಮಾದಕ ವ್ಯಸನಗಳತ್ತ ಹೆಚ್ಚಾಗಿ ಸಾಗುತ್ತಿದ್ದು ಸಮಾಜಕ್ಕೆ ಇದೊಂದು ಕಳಂಕವಾಗಿದೆ ಎಂದು ಹಿರಿಯ ದಿವಾಣ ನ್ಯಾಯಾಧೀಶ ಜೆ.ಆರ್ ಶೆಟ್ಟರ. ಮಾತನಾಡಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ ವಕೀಲರ ಸಂಘ,ಪೊಲೀಸ ಇಲಾಖೆ ಹಾಗೂ ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಾದಕ ವ್ಯಸನ ನಿರ್ಮೂಲನಾ ಕಾರ್ಯಕ್ರಮದಲ್ಲಿ ಸಸಿಗೆ ನೀರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತ ಸಮಾಜದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವಕರು ಮಾದಕ ವ್ಯಸನಿಗಳಾಗುತ್ತಿರುವುದು ಖೇದಕರ ಸಂಗತಿಯಾಗಿದ್ದು ಸಹವಾಸದಿಂದಲೂ, ಜಿಗುಪ್ಸೆಯಿಂದಲೂ ವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಎರಿಕೆಯಾಗುತ್ತಿದೆ ಉತ್ತಮ ಸಮಾಜ ನಿರ್ಮಾಣ ಮಾಡಲು ವ್ಯಸನ ಮುಕ್ತವಾದರೆ ಮಾತ್ರ ಸಾಧ್ಯ ಒಳ್ಳೆಯ ಹವ್ಯಾಸಗಳಿಂದ ವ್ಯಸನ ಮುಕ್ತರಾಗಬಹುದು ಎಂದರು, ಉಪನ್ಯಾಸಕರಾಗಿ ಆಗಮಿಸಿದ ಜಿಲ್ಲಾ ಮಾನಸಿಕ ಮನೋವೈದ್ಯರಾದ ಡಾ. ವೈಶಾಲಿ ಹೆಗಡೆ ಮಾತನಾಡಿ ಸಮಾಜದಲ್ಲಿ ಯುವಕರು ಮದ್ಯವಯಸ್ಕರು ಮಾದಕ ವ್ಯಸನಿಗಳಾಗುತ್ತಿದ್ದು ಇದರಿಂದ ಕೌಟುಂಬಿಕ ಕಲಹ ಸಮಾಜದಲ್ಲಿ ಗೌರವಹಾನಿ, ಮನಶಾಂತಿ ಇಲ್ಲದೆ ಪರದಾಡುಂತಾಗುತ್ತದೆ ಸಮಯಕ್ಕೆ ಸರಿಯಾಗಿ ಇವರಿಗೆ ಚಿಕಿತ್ಸೆ ನೀಡಿದ್ದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜ ವಿದ್ಯಾರ್ಥಿಗಳು ಭಾಗವಹಿಸಿದರು.
ಈ ಸಂದರ್ಭದಲ್ಲಿ ದಿವಾಣ ನ್ಯಾಯಾಧೀಶ ಗಣೇಶ ಎನ್,ಎ.ಪಿ.ಪಿ ಕವಿತಾ ಕಮಡೊಳ್ಳಿ, ವಕೀಲರ ಸಂಘ ಅಧ್ಯಕ್ಷ ಎಂ.ಎಸ್ ಧನಿಗೊಂಡ,ಡಾ.ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅನುಷ್ಠಾನಾಧಿಕಾರಿ,ಎಸ್.ಬಿ.ಕಳಸೂರಮಠ,ನ್ಯಾಯವಾದಿ ರವಿ ತೋಟಗಂಟಿ,ಕೆ.ಬಿ.ಗುಡಿಹಾಳ,ಶಿವರುದ್ರ ಧನಿಗೊಂಡ,ಎಸ್.ಜೆ.ಸುoಕದ,ಎಸ್.ವಿ.ಬೋಸ್ಲೆ,ಎಸ್.ಎಮ್.ಬಳಿಗೇರ,ಗೀತಾ ಮಟ್ಟಿ,ಎಮ್.ಜಿ.ಚೌದರಿ,ಇದ್ದರು.
ವರದಿ :ಶಶಿಕುಮಾರ ಕಲಘಟಗಿ
Join The Telegram | Join The WhatsApp |