ಚನ್ನಮ್ಮನ ಕಿತ್ತೂರ:- ಸೆಪ್ಟೆಂಬರ್ 10 ರಂದು ನಿಪ್ಪಾನಿಯಲ್ಲಿ ನಡೆಯುವ ಲಿಂಗಾಯತರಿಗೆ ರಾಜ್ಯ ಸರ್ಕಾರವು 2 ಎ ಮಿಸಲಾತಿ ಅನುಷ್ಠಾನ ಮತ್ತು ಲಿಂಗಾಯತ ಉಪ ಸಮಾಜಗಳಿಗೆ ಕೇಂದ್ರ ಸರ್ಕಾರದ ಓಬಿಸಿ ಮಿಸಲಾತಿಗೆ ಸೇರ್ಪಡೆಗಳಿಸಿ ಶಿಪಾರಾಸ್ಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಿಸಿ ಸಮೂಹಿಕ ಇಷ್ಟಲಿಂಗ ಪೂಜೆ ಮಾಡುವುದರೊಂದಿಗೆ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು. ಅವರು ಕಿತ್ತೂರಿನ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಸೆಪ್ಟೆಂಬರ್ 10 ರಂದು ನಿಪ್ಪಾನಿಯಲ್ಲಿ ನಡೆಯುವ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ. ಸಾವಿರಾರು ಸಂಖ್ಯೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರು ಭಾಂಧವರು ಭಾಗವಹಿಸಬೇಕು ಎಂದು ಹೇಳಿದರು.
ಲಿಂಗಾಯತ ಪಂಚಮಸಾಲಿ ಸಮಾಜದ ಚನ್ನಮ್ಮನ ಕಿತ್ತೂರ ತಾಲೂಕ ಅಧ್ಯಕ್ಷರಾದ ಡಿ ಆರ್ ಪಾಟೀಲ ಅವರು ಮಾತನಾಡಿದರು. ಚಂದ್ರಗೌಡ ಪಾಟೀಲ ಅವರು ಮಾತನಾಡಿದರು.
ಕಿತ್ತೂರ ತಾಲೂಕ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಯುವ ಘಟಕದ ಅಧ್ಯಕ್ಷರಾದ ಬಸವರಾಜ ಚಿನಗುಡಿ, ರೋಹಿಣಿ ಬಾಬಾಸಾಹೇಬ ಪಾಟೀಲ, ಮತ್ತು ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರು ಭಾಂಧವರು. ಉಪಸ್ಥಿದ್ದರು.
ವರದಿ:- ಬಸವರಾಜ ಭೀಮರಾಣಿ. ಜಗದೀಶ ಕಡೋಲಿ. .