Join The Telegram | Join The WhatsApp |
ಬೆಳಗಾವಿ:ಬೆಳಗಾವಿ -ಬಾಗಲಕೋಟೆ ರಸ್ತೆಯಲ್ಲಿ ಕಾರು, ಬೈಕ್ ಹಾಗೂ ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿ ASI ಪತ್ನಿ, ಮಗಳು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಕಾರು ಚಾಲಕ ಬೆಳಗಾವಿಯ ನಿಖಿಲ್ ಕದಂ (24), ಕುಡಚಿ ಠಾಣೆಯ ASI ಹಲಕಿ ಅವರ ಪತ್ನಿ ರೇಣುಕಾ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ASI ಹಲಕಿ ಅವರ ಪುತ್ರಿ ಅಕ್ಷತಾ (22) ಹಾಗೂ ಬೈಕ್’ನ ಹಿಂಬದಿ ಕುಳಿತಿದ್ದ ಹನಮವ್ವ (66) ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಸಾವಿಗಿಡಾಗಿದ್ದಾರೆ.
ಬೆಳಗಾವಿಯಿಂದ ತೆರಳುತ್ತಿದ್ದ ಕಾರು ಮತ್ತು ಬೈಕ್’ಗೆ ಲೋಕಾಪುರದಿಂದ ಗೋವಾಕ್ಕೆ ತೆರಳುತ್ತಿದ್ದ ಸಿಮೆಂಟ್ ಲಾರಿ ಡಿಕ್ಕಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇನ್ನಿಬ್ಬರು, ಬೈಕ್ ನಲ್ಲಿದ್ದ ಇಬ್ಬರು ಸೇರಿ ನಾಲ್ವರು ಸ್ಥಿತಿ ಗಂಭೀರಗೊಂಡಿದೆ ಎಂದು ತಿಳಿದುಬಂದಿದೆ. ಅವರನ್ನು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಎಸ್ ಪಿ ಸಂಜೀವ ಪಾಟೀಲ್, ಹೆಚ್ಚುವರಿ ಎಸ್ ಪಿ ಮಹಾನಂದ ನಂದಗಾವಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.
Join The Telegram | Join The WhatsApp |