ರಾಣೇಬೆನ್ನೂರು : -ಇಂದು ನಗರದ ಜನತೆ ನಿದ್ರೆಯಿಂದ ಹೊರ ಬರುವ ಮುನ್ನವೇ ಬೆಳ್ಳಂ ಬೆಳಿಗ್ಗೆಯೇ ರೌಂಡ್ಸ್ ಗಿಳಿದ ಶಹರ ಪೋಲಿಸ್ ಠಾಣೆಯ ಪಿಎಸ್ಐ ಗಡ್ಡೆಪ್ಪ ಗುಂಜಟಕಿ ನಸುಕಿನ 4 : 30 ರ ಚಳಿಯಲ್ಲೂ ರೌಡಿ ಶೀಟರ್ ಗಳಿಗೆ ಬೆವರು ಹರಿಸಿದ್ದಾರೆ .
ಮುಂಜಾನೆ 4 :30 ರಿಂದಲೇ ಕಾರ್ಯಾಚರಣೆಗಿಳಿದ ಪಿಎಸ್ಐ ಗಡ್ಡೆಪ್ಪ ಗುಂಜಟಕಿ 10 ಗಂಟೆಯವರೆಗೂ ನಗರದಲ್ಲಿರುವ ಸುಮಾರು 50 ಕ್ಕೂ ಹೆಚ್ಚು ರೌಡಿ ಶೀಟರ್ ಮನೆ ಮನೆಗಳಿಗೂ ತೆರಳಿ ಬಾಗಿಲು ಬಡಿದು ರೌಡಿಗಳ ಬೆವರು ಇಳಿಸಿದ್ದಾರೆ
ನಗರದಲ್ಲಿ ಮತ್ತೊಮ್ಮೆ ಕಾನೂನು ಭಂಗ ಚಟುವಟಿಕೆಗಳಲ್ಲಿ ಕಾಣಿಸಿಕೊಂಡರೆ ಯಾವುದೇ ಮುಲಾಜಿಲ್ಲದೆ ಕಾನೂನು ಶಿಸ್ತು ಕ್ರಮ ಕೈಗೊಳ್ಳಬೇಕಾಗುವುದು ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿರುವ
ಪಿಎಸ್ಐ ಅವರ ಕಾರ್ಯಕ್ಷಮತೆ ನಗರದ ಜನತೆಯ ಮೆಚ್ಚುಗೆಗೆ ಪಾತ್ರವಾಯಿತು .
ಸಿ ವಿ ಕಡ್ಲೆಪ್ಪನವರ , ವಿಠಲ್ ಪಾಟೀಲ್, ಚಂದ್ರು ಸಂಗ್ಮನಿ, ರಮೇಶ್ ಕುಸಗೂರು, ವಿನಾಯಕ ಮುಂತಾದ ಪೋಲಿಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಇದ್ದರು
ವರದಿ:- ನಾಗಪ್ಪಾ