Join The Telegram | Join The WhatsApp |
ಕಲಘಟಗಿ :ಕರ್ನಾಟಕ ಇತಿಹಾಸ ಶರಣ ಪರಂಪರೆಯಲ್ಲಿ ಅನೇಕರು ಬಸವಣ್ಣನವರ ತತ್ವ ಆದರ್ಶಗಳಿಗೆ ಮಾರು ಹೋಗಿ ಅವರ ಅನುಯಾಯಿಗಳಾಗಿ ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಆದರ್ಶ ಮೂರ್ತಿ ಶರಣ ಹೂಗಾರ ಮಾದಯ್ಯನವರು ಎಂದು ಶಾಸಕ ಸಿ.ಎಂ ನಿಂಬಣ್ಣವರ ಮಾತನಾಡಿದರು.
ಅವರು ಪಟ್ಟಣ ಪಂಚಾಯತ ಸಭಾ ಭವನದಲ್ಲಿ ಶರಣ ಹೂಗಾರ ಮಾದಯ್ಯನವರ ಜಯಂತ್ಯೋತಸ್ವದ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿ ಶರಣರು ಇ ನಾಡಿನ ಸಂಪತ್ತು ಹೂಗಾರ ಮಾದಯ್ಯನವರು ಕೂಡ ೧೨ನೇ ಶತಮಾನದ ಬಸವಣ್ಣನವರ ಒಡನಾಟದಲ್ಲಿದ್ದವರು ತಮ್ಮ ನಿತ್ಯ ಜೀವನದಲ್ಲಿ ಹೂ ಬಿಲ್ವಪತ್ರಿಗಳನ್ನು ಹಂಚಿ ಜೀವನ ಸಾಗಿಸುತ್ತಿದ್ದವರು ಕಾಯಕಯೋಗಿಗಳಾಗಿದ್ದವರು ಎಂದರು.
ತಾಲೂಕಾ ಸಮಾಜದ ಅಧ್ಯಕ್ಷ ಶಂಭುಲಿoಗ ಹೂಗಾರ ಮಾತನಾಡಿದರು
ದಿವ್ಯ ಸಾನಿದ್ಯವನ್ನು ಹನ್ನೆರಡು ಮಠದ ಷ.ಬ್ರ ರೇವಣಸಿಧ್ದ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು.
ಶ್ರೀ ಶರಣ ಬಸವಣ್ಣ ಹಾಗೂ ಹೂಗಾರ ಮಾದಯ್ಯನವರ ಭಾವ ಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕುಂಬಮೇಳ ಹಾಗೂ ಸಕಲ ವಾದ್ಯಗಳೊಂದಿಗೆ ಮೆರವಣ ಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಾಡಸಿದ್ದೇಶ್ವರ ಹೂಗಾರ,ಶಂಭುಲಿoಗಪ್ಪ ಹೂಗಾರ, ಸೋಮನಾಥ ಹೂಗಾರ ಗಿರೀಶ ಮುಕ್ಕಲ್ಲ,ಶಿವಪ್ಪ ಹೂಗಾರ, ಹಾಗೂ ಸಮಾಜ ಬಾಂಧವರು ಇದ್ದರು.
ಕಾರ್ಯಕ್ರಮದ ನಿರೂಪಣೆ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಪುದನಗೌಡ ನೆರವೇರಿಸಿದರು.
ವರದಿ :ಶಶಿಕುಮಾರ ಕಲಘಟಗಿ
Join The Telegram | Join The WhatsApp |