Join The Telegram | Join The WhatsApp |
ಹರಪನಹಳ್ಳಿ: ಸರ್ಕಾರ ಕೂಡಲೇ ಹರಪನಹಳ್ಳಿ ತಾಲೂಕನ್ನು ನೆರೆಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ ಹಾಗೂ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ಶಶಿಧರ್ ಪೂಜಾರ್ ಒತ್ತಾಯ ಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶಶಿಧರ್ ಪೂಜಾ ರ್ ಅವರು ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯ ಸ್ತಗೊಂಡಿದ್ದು ಅತಿವೃಷ್ಠಿ ಅನಾವೃಷ್ಠಿ ಸಂಭವಿಸಿದೆ. ಕೃಷಿ ಹಾಗೂ ತೋಟಗಾರಿಗೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ ಇದರಿಂದಾಗಿ ರೈತರು ಕಾಂಗಾಲಾಗಿದ್ದಾರೆ ಎಂದು ಅಂತಕ ವ್ಯಕ್ತಪಡಿಸಿದ್ದಾರೆ.
ಈ ಮಳೆಯಿಂದಾಗಿ ತಾಲೂಕಿನಲ್ಲಿ ಸಾವಿರಾರು ಹೆಕ್ಟೇರ್ ನಷ್ಟು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸಂಪೂರ್ಣ ವಾಗಿ ಜಲಾವೃತ್ತಗೊಂಡಿದ್ದು, ಬೆಳೆಹಾನಿ ಉಂಟಾಗಿದೆ ಜೊತೆಗೆ ಸಾವಿರಾರು ರೈತರು ತಮ್ಮ ಮನೆಗಳನ್ನು ಕಳೆದು ಕೊಂಡು ಇರಲು ಸೂರಿಲ್ಲದೇ ಬೀದಿಗೆ ಬಂದಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ರೈತರಿಗೆ ಆದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸತತವಾಗಿ ಸುರಿಯುತ್ತಿರುವ ಈ ಮಳೆಯಿಂದಾಗಿ ರೈತರು ಬೆಳೆದ ಈರುಳ್ಳಿ, ಮೆಣಸಿನಕಾಯಿ, ಟಮೋಟ, ಭತ್ತ, ರಾಗಿ, ಜೋಳ, ಮೆಕ್ಕೆಜೋಳ, ಹತ್ತಿ, ರೇಷ್ಮೆ, ಸೇರಿದಂತೆ ತರಕಾರಿ ಬೆಳೆಗಳನ್ನೊಳಗೊಂಡು ಸಾವಿರಾರು ಹೆಕ್ಟೇರ್ ನಷ್ಟು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ನಾಶ ವಾಗಿವೆ ಮತ್ತು ಸಾವಿರಾರು ಮನೆಗಳಿಗೆ ಹಾನಿಯಾಗಿವೆ. ಹಾಗಾಗಿ ಸರ್ಕಾರ ಕೂಡಲೇ ಹರಪನಹಳ್ಳಿ ತಾಲೂಕನ್ನ ನೆರೆಪೀಡಿತ ಪ್ರದೇಶವೆಂದು ಘೋಷಿಸಬೇಕು ಬೆಳೆ ಹಾ ಗೂ ಮನೆಗಳ ಹಾನಿಗೀಡಾದ ರೈತರಿಗೆ ಸೂಕ್ತ ಪರಿಹಾರ ನೀಡಿ ನೊಂದ ರೈತರಿಗೆ ನೆರವಾಗಬೇಕು ಎಂದು ಶಶಿಧರ್ ಪೂಜಾರ್ ಆಗ್ರಹಿಸಿದ್ದಾರೆ.
Join The Telegram | Join The WhatsApp |