Join The Telegram | Join The WhatsApp |
ಮುದಗಲ್ಲ : ಇಂದು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಯನ್ನು ಮುದಗಲ್ಲ ಪುರಸಭೆ ಇಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರವಿ ವಡ್ಡರ್ ಮಾತನಾಡಿದರು 12ನೇ ಶತಮಾನ ಮಹಾಶರಣ ಶ್ರೀ ಸಿದ್ದರಾಮೇಶ್ವರ ಸಮಾಜದ ಒಳಿತಿಗಾಗಿ ಬದುಕಿದ ನಿಜವಾದ ಕಾಯಕ ಯೋಗಿ. ಹೀಗಾಗಿ ಜಾತಿ, ಮತ, ಪಂಥಗಳೆನ್ನದೆ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಎಲ್ಲರೂ ಆಚರಿಸಬೇಕು. ಅಲ್ಲದೆ, ಅವರ ಆದರ್ಶವನ್ನು ಪಾಲಿಸಬೇಕು. 900 ವರ್ಷಗಳ ನಂತರ ಸಿದ್ದರಾಮೇಶ್ವರರನ್ನು ನೆನೆಯುತ್ತಿರುವ ಇಂದಿನ ನಮ್ಮ ಸಮಾಜ ತನ್ನನ್ನು ತಾವು ಅರಿತು ಬದಲಾಗಬೇಕಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಮೈಬುಸಾಬ ಕಡ್ಡಿಪುಡಿ ಹಾಗೂ ನೈಮಲ್ಯ ಅಧಿಕಾರಿಯಾದ ಆರೀಪ್ ಹುನ್ನೀಸಾಬೇಗಂ ,ಸಿಬ್ಬಂದಿ ಗಳಾದ ಜಿಲಾನಿಪಾಶ ,ನಿತ್ಯ ನಂದ ,ಹುಸೇನಪ್ಪ , ಕಾಂಗ್ರೆಸ್ ಮುಖಂಡರಾದ ಸೈಯದ ಸಾದ ,ರವಿ ವಡ್ಡರ್ ,ಉಂಬಣ್ಣ ವಡ್ಡರ್ ,ಮಹಾಂತೇಶ ಭೋವಿ,ರವಿ ಜೀಡಿ, ಶೀಲಪ್ಪ,
ಮತ್ತಿತರರು ಇದ್ದರು.
ವರದಿ: ಮಂಜುನಾಥ ಕುಂಬಾರ
Join The Telegram | Join The WhatsApp |