ಬಳವಾಡ :- ಸ್ಥಳೀಯ ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ಶ್ರೀ ಅಪ್ಪಯ್ಯ ಸ್ವಾಮಿಯ ಜಾತ್ರೆಯ ನಿಮಿತ್ಯವಾಗಿ ಹಲವಾರು ಕ್ರೀಡೆಗಳು ಜರುಗಿದವು. ಇದರಲ್ಲಿ ಮುಖ್ಯವಾಗಿ ಕಬಡ್ಡಿ ಆಟವನ್ನು ಊರಿನ ಗ್ರಾಮಸ್ಥರು ಕಬಡ್ಡಿ ಆಟವನ್ನು ಆಡುವುದರೊಂದಿಗೆ ಹಾಗೂ ಕಬಡ್ಡಿಗೆ ಶ್ರೀ ಅಪ್ಪು ನೇಮಗೌಡ ರಿಬ್ಬನ್ ಕಟ್ ಮಾಡುವುದರೊಂದಿಗೆ ಆಟಕ್ಕೆ ಚಾಲನೆಯನ್ನು ನೀಡಿ, ದೇಸಿಯ ಕ್ರೀಡೆಗಳಿಗೆ ಆದ್ಯತೆ ನೀಡಿ ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಕಬಡ್ಡಿ ಆಟವನ್ನು ಆಡಿರುವ ಪ್ರಮುಖ ಕ್ರೀಡಾಪಟುಗಳು ಹಾಗೂ ನೆರೆಯ ಮಹಾರಾಷ್ಟ್ರದ ಹಲವಾರು ಕಬಡ್ಡಿ ಟೀಮ್ ಗಳು ಭಾಗವಹಿಸಿದ್ದು ಪಂದ್ಯಾವಳಿಗಳ ವಿಶೇಷ ಆಕರ್ಷಣೆಯಾಗಿತ್ತು. ಕಬಡ್ಡಿ ಆಟದಲ್ಲಿ ಪ್ರಥಮ ಸ್ಥಾನವನ್ನು ಮೋಳೆ ಕ್ರೀಡಾಪಟುಗಳು, ದ್ವಿತೀಯ ಸ್ಥಾನವನ್ನು ಸವದಿ ಕ್ರೀಡಾಪಟುಗಳು, ತೃತೀಯ ಸ್ಥಾನವನ್ನು ಅಡಹಳ್ಳಿ ಕ್ರೀಡಾಪಟುಗಳು ಪ್ರಶಸ್ತಿಯನ್ನು ಗೆದ್ದುಕೊಂಡು ಆಟಗಾರರು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಅಪ್ಪು ನೇಮಗೌಡ, ಮಹಾದೇವ್ ಪಾಟೀಲ್, ಸಂಭಾಜಿ ಐನಾಪುರ್, ಬಸವರಾಜ್ ಸವದಿ, ಜಾಫರ್ ಸಾಬ್ ನದಾಫ್, ಬಸವರಾಜ್ ಪಾಟೀಲ್, ರಮೇಶ್ ಅಥಣಿ, ಮಲ್ಲಿಕಾರ್ಜುನ್ ಹರೋಲಿ,ಹಾಗೂ ಊರಿನ ಪ್ರಮುಖರು ಹಾಜರಿದ್ದರು.
ವರದಿ : ಡಾ. ಅಪ್ಪು ಮಾದರ