ಬೆಂಗಳೂರು: ಲೋಕಸಭಾ ಚುನಾವಣೆಗೆ ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರು ಇಂದು ಖಾಸಗಿ ಮಾಧ್ಯಮವೊಂದರ ಜೊತೆಗೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಸುಮಾರು 20 ಲೋಕಸಭಾ ಸ್ಥಾನಗಳನ್ನು ಗೆಲ್ಲವುದಾಗಿ ಹೇಳಿದರು.
ಇನ್ನೂ ಬಿಜೆಪಿ ಮತ್ತು ಜೆಡಿಎಸ್ ಅನಾಥ ಪ್ರಜ್ಞೆಯನ್ನು ಅನುಭವಿಸುತ್ತಿದ್ದಾವೆ, ಇವೆರಡನ್ನು ನಾವು ಸೋಲಿಸುತ್ತೇವೆ ಅಂತ ತಿಳಿಸಿದರು.
ಇನ್ನೂ ಕಾಂಗ್ರೆಸ್ನ ಸಿದ್ದಾಂತವನ್ನು ಒಪ್ಪಿ ಯಾರೇ ಬಂದರೂ ಕೂಡ ನಾವು ಸ್ವಾಗತ ಮಾಡುತ್ತೇವೆ ಅಂತ ಹೇಳಿದರು. ಇನ್ನೂ ಕಾವೇರಿ ನದಿ ನೀರಿಗೆ ಸಂಬಂಧಪಟ್ಟಂತೆ ಅವರು ಮಾತನಾಡಿ, ಈ ಸಾರಿ ಮಳೆ ನಮಗೆ ಕೈಕೊಟ್ಟಿದ್ದು123 ವರುಶಗಳಲ್ಲಿ ಈ ರೀತಿ ಯಾವುದೇ ತೊಂದರೆ ಆಗಿರುವುದಿಲ್ಲ, ಈಗ ಆಗಿದೆ.
ಮಳೆ ಕೊರತೆಯಿಂದಾಗಿ ನಾವು ನೀರು ಬಿಡುಗಡೆ ಸಾಧ್ಯವಿಲ್ಲ, ಆದರೆ ಸುಪ್ರಿಂಕೋರ್ಟ್ನವರು, ಕೇಂಧ್ರ ಸರ್ಕಾರ ನದಿ ನೀರು ಪ್ರಾಧಿಕಾರ ರಚನೆ ಮಾಡಿದ್ದು, ಅವರು ಆದೇಶ ಮಾಡಿದೆ, ನಾವು ನಮ್ಮ ಪರಿಸ್ಥಿತಿಯನ್ನು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೇವೆ ಅಂತ ಅವರು ಹೇಳಿದರು. ಕುಡಿಯುವ ನೀರು ಸೇರಿದಂಥೆ ವಿವಿಧ ಕಾರಣಗಳಿಗೆ 106 ಟಿಎಂಸಿ ನೀರು ನಮಗೆ ಬೇಕಾಗಿದೆ ಅಂತ ಹೇಳಿದರು.