ಮೊಳಕಾಲ್ಮುರು:– ಜೀವನದಲ್ಲಿ ಶ್ರೀ ಕೃಷ್ಣನ ಮಾರ್ಗಗಳನ್ನು ಅನುಸರಿಸಬೇಕು ಲೌಕಿಕ ಬದುಕು ಮತ್ತು ಹಲೋಕಿಕ ಬದುಕನಲ್ಲಿ ಯಾವ ರೀತಿ ಬದುಕಬೇಕು ಎಂಬುದನ್ನು ವಿಶೇಷವಾಗಿ ತಿಳಿಸಿಕೊಟ್ಟಿದ್ದಾರೆ ಎಂದು ತಹಸೀಲ್ದಾರ್ ಎಂವಿ ರೂಪಾ ರವರು ತಿಳಿಸಿದರು..
ಪಟ್ಟಣದ ಆಡಳಿತ ಸೌಧದಲ್ಲಿ ಬುಧವಾರದಂದು ಸರಳವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಣೆ ಮಾಡಿ ಮಾತನಾಡಿದರು..
ನಮ್ಮಲ್ಲಿರುವ ದುರಲೋಚನೆ ಕೆಟ್ಟ ಅಭ್ಯಾಸಗಳನ್ನು ದೂರ ಮಾಡಿದರು ನಮ್ಮಲ್ಲಿ ಶ್ರೀ ಕೃಷ್ಣನನ್ನು ನೋಡಬಹುದು. ಎಲ್ಲಾ ಧರ್ಮ ಗ್ರಂಥಗಳಲ್ಲಿ ಹೇಳುವುದು ಒಂದೇ ಮಾನವ ವಿಶ್ವಮಾನವನಾಗಬೇಕು ಎಂದು ಒಂದೊಂದು ಗ್ರಂಥದಲ್ಲಿ ಒಂದು ತರಹ ಹೇಳುತ್ತಾರೆ.
ಮಂಕುತಿಮ್ಮನ ಕಥೆಯನ್ನು ನೀವು ಕೇಳಿದ್ದೀರಾ ಪ್ರತಿಯೊಬ್ಬರೂ ಕೂಡ ನಾನು ಎಂಬುದನ್ನು ಬಿಟ್ಟರೆ ಜೀವನದಲ್ಲಿ ಮುಂದೆ ಬರಬಹುದು ಆ ಸಂಸಾರ ಕೂಡ ಹಸನಾಗಿರುತ್ತದೆ ಎಂದರು ಪ್ರತಿಯೊಂದು ಮನೆಯೂ ಒಳ್ಳೆಯ ಮಾರ್ಗದಲ್ಲಿ ನಡೆದರೆ ಹಳ್ಳಿ ಉದ್ಧಾರವಾಗುತ್ತದೆ ಹಳ್ಳಿ ಉದ್ಧಾರವಾದರೆ ಪಟ್ಟಣ ಉದ್ಧಾರವಾಗುತ್ತದೆ ಇದೇ ರೀತಿ ದೇಶವು ಕೂಡ ಉನ್ನತ ಮಟ್ಟದಲ್ಲಿ ಹೋಗುತ್ತದೆ ಎಂದರು.. ಪ್ರತಿಯೊಂದು ಸಮಾಜದವರು ಇದನ್ನು ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಪಾಂಡುರಂಗಪ್ಪ ಮಾತನಾಡಿ ನೀವು ಮಹಾಭಾರತ ಭಗವದ್ಗೀತೆಯನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ ಜೀವನದಲ್ಲಿ ಕಷ್ಟಗಳನ್ನು ಯಾವ ರೀತಿ ಎದುರಿಸಬೇಕು ಎನ್ನುವುದನ್ನು ಸರಳವಾಗಿ ತೋರಿಸಿದ್ದಾರೆ ಎಂತ ಕಷ್ಟ ಬಂದರೂ ಯಾವುದೇ ಯಾವುದಕ್ಕೆ ಅಂಜದೆ ಮುನ್ನುಗಬೇಕು ಎಂದರು.
ಮಹಾಭಾರತದಲ್ಲಿ ನೀವು ಕೆಲವು ಸನ್ನಿವೇಶಗಳನ್ನು ಕೇಳಿರುತ್ತೀರಾ ಅಣ್ಣತಮ್ಮಂದಿರ ಜಗಳವಾಗಿ ಕೊನೆಗೂ ಸತ್ಯವೇ ಗೆಲ್ಲುತ್ತದೆ ಶ್ರೀ ಕೃಷ್ಣನ ಲೀಲೆಗಳನ್ನು ನೀವು ತಿಳಿಯಬೇಕು.. ಹೌರ ಮಾರ್ಗದಲ್ಲಿ ಎಲ್ಲಾ ಸಮಾಜದವರು ನಡೆಯಬೇಕು ಶ್ರೀ ಕೃಷ್ಣನು ಯಾವುದೇ ಒಂದು ಸಮಾಜಕ್ಕೆ ಸೀಮಿತವಲ್ಲ ಇಡೀ ದೇಶಕ್ಕೆ ಇಡೀ ಪ್ರಪಂಚಕ್ಕೆ ಶ್ರೀಕೃಷ್ಣ ಏನೆಂಬುದು ಗೊತ್ತಾಗಿದೆ ಆದರಿಂದ ನೀವು ಅವರ ಮಾರ್ಗದಲ್ಲಿ ನಡೆಯಬೇಕು..
ಈ ಸಂದರ್ಭದಲ್ಲಿ ಯಾದವ ಬಾಂಧವರು ಕೆಲ ಹಿತನುಡಿಗಳನ್ನು ತಿಳಿಸಿದರು.. ಎಲ್ಲಾ ಯಾದವ ಕುಲಬಾಂಧವರು ಉಪಸ್ಥಿತರಿದ್ದರು.
ವರದಿ ಪಿಎಂ ಗಂಗಾಧರ