Join The Telegram | Join The WhatsApp |
ಅಥಣಿ: ಲೆಂಪಿ ವೈರಸ್ ಚರ್ಮ ಗಂಟು ರೋಗ ದಿನೇ ದಿನೇ ಪಸಲಿಸುತ್ತಿದ್ದೂ ರೈತರಲ್ಲಿ ಆತಂಕ ಮನೆ ಮಾಡಿದೆ.
ಆರಂಭದಲ್ಲಿ ಗೋವಿನ ಮೈಯಲ್ಲಿ ಒಂದರೆಡು ಕಡೆ ಗಂಟು ರೂಪದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಕೆಲವೇ ದಿನಗಳಲ್ಲಿ ಮೈಯೆಲ್ಲ ಆವರಿಸಿಕೊಳ್ಳುತ್ತದೆ.
ಇದು ನೊಣಗಳ ಮೂಲಕ ಹರಡುವುದರಿಂದ ಅಕ್ಕಪಕ್ಕದಲ್ಲಿರುವ ಗೋವುಗಳಿಗೆ ಹರಡುವ ಸಾಧ್ಯತೆಯಿದೆ. ಒಂದೊಮ್ಮೆ ಒಂದು ಹಸುವಿನಲ್ಲಿ ಕಾಣಿಸಿಕೊಂಡರೂ ಜತೆಗಿರುವ ಎಲ್ಲ ಹಸುಗಳಿಗೆ ಚಿಕಿತ್ಸೆ ನೀಡಬೇಕಾಗುತ್ತದೆ.
ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಹಲವಾರು ದೇಸಿ ಬಿಳಿ ದನ ಹಾಗೂ ಜರ್ಷಿ ದನಗಲ್ಲಿ ಈ ಚರ್ಮ ಗಂಟು ರೋಗ ಕಾಣಿಸಿಕೊಂಡಿದೆ.
ಅಥಣಿ ತಾಲೂಕಿನ ಹಳ್ಳಿಗಳಲ್ಲಿ ಪಶು ವೈದ್ಯಕೀಯ ಶಿಬ್ಬಂದಿ ಕೊರತೆ ಇರುವದರಿಂದ ಪ್ರತಿ ಮನೆಗೆ ಜಾನುವಾರುಗಳಿಗೆ ಚಿಕಿತ್ಸೆ ಕೂಡಲು ಸಮಸ್ಸೆ ಎದರಿಸುವಂತಾಗಿದೆ.
ಒಂದು ಜಾನುವಾರು ಗೆ ಬಂದ ಚರ್ಮಗಂಟು ರೋಗ ವಾರದ ಒಳಗೆ ಇನ್ನುವುಳಿದ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಅಷ್ಟೇ ಅಲ್ಲದೆ ನೆರೆಹೊರೆಯ ಜಾನುವಾರುಗಲ್ಲಿ ರೋಗ ಪತ್ಯೆಯಾಗುತ್ತಿದೆ.
ರೋಗ ಬರದಂತೆ ಮುಂಜಾಗೃತ ಕ್ರಮವಾಗಿ ಜಾನುವಾರಗಳಿಗೆ ಚುಚ್ಚುಮದ್ದು ನೀಡಬೇಕೆಂದು ರೈತ ಬಾಂದವರ ಕಳಕಳಿಯಾಗಿದೆ
ಮುಂಜಾಗೃತ ಕ್ರಮವಾಗಿ ಜಾನುವಾರುಗಳ ಮೇಲೆ ಲಕ್ಷವಿಟ್ಟು ರೋಗದ ಲಕ್ಷಣ ಕಾಣಿಸಿಕೊಂಡರೆ ಕೂಡಲೆ ಪಶುವೈದ್ಯರನ್ನು ಸಂಪರ್ಕಿಸಲು ಇಲ್ಲಿಯ ಸಂಬರಗಿ ಪಶು ಆಸ್ಪತ್ರೆಯ ಪರಿಕ್ಷಕಿಯರಾದ “ಶ್ರೀಮತಿ ಆರ್ ಜಿ ಬೇವಿನಕಟ್ಟಿ” ತಿಳಿಸಿದ್ದಾರೆ.
ವರದಿ: ಅಬ್ಬಾಸ ಮುಲ್ಲಾ
Join The Telegram | Join The WhatsApp |