ಭಾರತದ ಇಸ್ರೋ ಸಂಸ್ಥೆ ಸೂರ್ಯನ ಅಧ್ಯಯನ ನಡೆಸಲು ಈಗಾಗಲೇ ನೌಕೆ ಉಡಾಯಿಸಿ ಉಪಗ್ರಹ ಕಳುಹಿಸಿದೆ. ಆದ್ರೆ ಈ ವೇಳೆ ಭಾರತದ ವಿಜ್ಞಾನಿಗಳಿಗೆ ಬಂಡೆಯಂತಹ ಸವಾಲು ಎದುರಾಗಿದೆ. ಹಾಗಾದರೆ ಏನದು ಸವಾಲು? ಭಾರತದ ಇಸ್ರೋ ಸಂಸ್ಥೆ ಸವಾಲನ್ನು ಹೇಗೆ ಸ್ವೀಕರಿಸಿದೆ? ಬನ್ನಿ ತಿಳಿಯೋಣ.
A G1 Watch is in effect for the 3 Sep UTC-day. A CME erupted from the Sun on 30 Aug and it is likely an arrival at Earth will occur, with G1 storm levels probable as early as the evening of 2 Sep EDT (3 Sep UTC-day). Visit https://t.co/9n7phHbDdS for more info. pic.twitter.com/tukpWerSsJ
— NOAA Space Weather (@NWSSWPC) August 31, 2023
ಸುಡು ಸೂರ್ಯನ ಅಧ್ಯಯನ ನಡೆಸಿ, ಭೂಮಿ ಮೇಲೆ ಸೂರ್ಯನ ಪ್ರಭಾವದ ಕುರಿತು ತಿಳಿಯಲು ಭಾರತ ‘ಆದಿತ್ಯ ಎಲ್ 1’ ಉಡಾಯಿಸಿತ್ತು. ಆದರೆ ಹೀಗೆ ಭಾರತದ ನೌಕೆಯನ್ನ ಬಾಹ್ಯಾಕಾಶಕ್ಕೆ ಕಳುಹಿಸಿ ಕೇವಲ ಎರಡು ದಿನದಲ್ಲಿ ಡೇಂಜರ್ ಸಿಗ್ನಲ್ ಸಿಕ್ಕಿದೆ. ಸೂರ್ಯ ರೊಚ್ಚಿಗೆದ್ದು ಕೆಂಡ ಉಗುಳುತ್ತಿದ್ದು, ಸೌರ ಬಿರುಗಾಳಿಯ ಅಬ್ಬರಕ್ಕೆ ಭೂಮಿ ತತ್ತರಿಸಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಹಾಗಾದ್ರೆ ಇದರಿಂದ ಭಾರತದ ಇಸ್ರೋ ಉಪಗ್ರಹಕ್ಕೆ ಸಮಸ್ಯೆ ಎದುರಾಗುತ್ತಾ? ಮುಂದೆ ಓದಿ.
ಸೂರ್ಯನ ಮೇಲೂ ಚಂಡಮಾರುತ!
ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳು ದೂರದಿಂದ ನೋಡಿದಷ್ಟು ಸುಂದರವಲ್ಲ. ನಕ್ಷತ್ರದ ಭೀಕರತೆ ತಿಳಿಯಲು ಹತ್ತಿರಕ್ಕೆ ಹೋಗಬೇಕು. ಹೀಗೆ ನಮ್ಮ ಸೂರ್ಯ ಕೂಡ ಕೊತ ಕೊತ ಕುದಿಯುತ್ತಿದ್ದಾನೆ. ಸುಡುವ ಸೂರ್ಯನ ಒಳಗೆ ಭಾರಿ ಪ್ರಮಾಣದ ಶಕ್ತಿ ಅಡಗಿರುತ್ತದೆ. ಈ ಪ್ರಕ್ರಿಯೆ ಪರಿಣಾಮ ಸೌರ ಸ್ಫೋಟವು ಸಂಭವಿಸಿದಾಗ ಬಿಡುಗಡೆಯಾಗುವ ಕರೋನಲ್ ಮಾಸ್ ಎಜೆಕ್ಷನ್ ಕಣಗಳಿಂದ ಸೌರ ಬಿರುಗಾಳಿ ಉಂಟಾಗುತ್ತೆ. ಈ ಸ್ಪೋಟವನ್ನು ಸೌರ ಜ್ವಾಲೆ ಅಂತಾ ಕೂಡ ಕರೆಯಲಾಗುತ್ತೆ. ಹಾಗಾದ್ರೆ ಸೌರ ಬಿರುಗಾಳಿಯು ಭೂಮಿ ಮೇಲೆ ಉಂಟುಮಾಡುವ ಅಪಾಯ ಎಂತಹದ್ದು?