ಬೆಂಗಳೂರು : ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಪೋಲೀಸ್ ಅಧಿಕಾರಿಗಳ ವಾರ್ಷಿಕ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಶೀಘ್ರವೇ 2454 ವಿವಿಧ ಹಂತದ ಪೊಲೀಸ್ ಹುದ್ದೆಯನ್ನು ಭರ್ತಿ ಮಾಡುತ್ತೇವೆ ಎಂದು ತಿಳಿಸಿದರು.
ಹೊಸದಾಗಿ 5 ಸಂಚಾರಿ ಠಾಣೆ ಹಾಗೂ ಆರು ಮಹಿಳಾ ಠಾಣೆಯನ್ನು ತೆರೆಯಲಾಗುತ್ತದೆ.ಹಿರಿಯ ಪೊಲೀಸ್ ಅಧಿಕಾರಿಗಳು ಠಾಣೆಗಳಿಗೆ ಭೇಟಿ ನೀಡಬೇಕು.ವ್ಯಾಪ್ತಿಗಳಲ್ಲಿ ಅಪರಾಧ ನಿಯಂತ್ರಣ ಆಗದಿದ್ರೆ ಡಿಸಿಪಿ ಹಾಗೂ ಎಸ್ ಪಿ ಅವರೇ ಹೊಣೆಯಾಗಿರುತ್ತಾರೆ, ಒಳ್ಳೆಯ ಕೆಲಸ ಮಾಡುವ ಮೂಲಕ ಅಧಿಕಾರಿಗಳಿಗೆ ಸಹಕಾರ ಪ್ರೋತ್ಸಾಹ ನೀಡುತ್ತೇವೆ ಎಂದು ಹೇಳಿದರು.
ಜನರ ವಿಶ್ವಾಸ ಹಾಗೂ ನಂಬಿಕೆಗಳಿಸಿ ಕಾರ್ಯನಿರ್ವಹಿಸಿ.ಕರ್ತವ್ಯ ಲೋಪ ಮಾಡಿದವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಡ್ರಗ್ಸ್ ನಿಂದ ಯುವ ಸಮುದಾಯ ಹಾಳಾಗುತ್ತಿದೆ.ಡ್ರಗ್ಸ್ ನಿರ್ಮೂಲನೆ ಒಂದು ಅಭಿಯಾನದ ರೀತಿಯಲ್ಲಿ ಆಗಬೇಕು. ಯಾರು ಕೂಡ ಕಾನೂನನ್ನು ಕೈಗೆತ್ತಿಕೊಳ್ಳಲು ಬಿಡಬಾರದು ಹಾಗೂ ಅವಕಾಶ ಕೊಡಬಾರದು ಎಂದು ಹೇಳಿದರು.
ಹೊಸವಾಹನಗಳ ಖರೀದಿಗೆ ಪೊಲೀಸ್ ಇಲಾಖೆಗೆ ಮುಂದಿನ ಕ್ಯಾಬಿನೆಟ್ ನಲ್ಲಿ 100 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗುತ್ತದೆ.ಪೊಲೀಸ್ ಸಿಬ್ಬಂದಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು ನೈತಿಕ ಪೊಲೀಸ್ ಗಿರಿ ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.