Join The Telegram | Join The WhatsApp |
ಸಿರುಗುಪ್ಪ : ದಿ.13ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಅನಾವರಣಗೊಳ್ಳಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿಯನ್ನು ತಾಲೂಕು ವೀರಶೈವ ಲಿಂಗಾಯತ ಹಾಗೂ ಬಸವ ಬಳಗ ಟ್ರಸ್ಟ್ ವತಿಯಿಂದ ತಾಲೂಕಿನ ಇಬ್ರಾಹಿಂಪುರ ಗ್ರಾಮದಿಂದ ನಗರದ ದೇವಲಾಪುರ ಕ್ರಾಸ್ ಬಳಿಯ ಶ್ರೀ ಬಸವೇಶ್ವರ ವೃತ್ತದವರೆಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಕರೆತರಲಾಯಿತು.
ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ಗುರುಬಸವ ಮಠದ ಶ್ರೀ ಬಸವಭೂಷಣ ಶ್ರೀ ಆರ್ಶೀವಚನ ನೀಡಿ 12ನೇ ಶತಮಾನದಲ್ಲಿ ಸಮಾಜದಲ್ಲಿ ಸಮಾನತೆಯ ಕ್ರಾಂತಿಯನ್ನು0ಟು ಮಾಡಿ ಮಾನವ ಧರ್ಮಕ್ಕಿಂತ ಅನ್ಯ ಧರ್ಮವಿಲ್ಲವೆಂದು ಸಾರಿದ ಮಹಾ ಮಾನವತಾವಾದಿ, ವಿಶ್ವಗುರು ಬಸವಣ್ಣರ ಮೂರ್ತಿ ಪ್ರತಿಷ್ಟಾಪನೆಯು ಬಹಳ ದಿನಗಳ ಕನಸಾಗಿತ್ತು.
ವೀರಶೈವ ಲಿಂಗಾಯತ ಜನಾಂಗದ ಬೇಡಿಕೆಯನ್ನು ಶಾಸಕರಾದ ಎಂ.ಎಸ್.ಸೋಮಲಿ0ಗಪ್ಪನವರು ಈಡೇರಿಸುತ್ತಿದ್ದು, ಜನ ಸಂಕಲ್ಪ ಯಾತ್ರೆಗಾಗಿ ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳಿ0ದ ನಾಳೆ ಶಿಲಾನ್ಯಾಸಗೊಳ್ಳಲಿದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಮಂಗಲೆಯರ ಕಳಸ, ಛದ್ಮ ವೇಷದಲ್ಲಿ ಮಕ್ಕಳು, ವೀರಭದ್ರೇಶ್ವರ ಒಡಪುಗಳೊಂದಿಗೆ ಕುಣಿತ, ಡೊಳ್ಳು ಕುಣಿತ, ನಗಾರಿ ಇನ್ನಿತರ ವಾದ್ಯಗಳು, ಶ್ರೀ ಬಸವಣ್ಣರ ನೂತನ ಬೃಹತ್ ಮೂರ್ತಿ ವಿಶೇಷ ಆಕರ್ಷಣೀಯವಾಗಿದ್ದವು.
ಇದೇ ವೇಳೆ ಹಚ್ಚೊಳ್ಳಿಯ ಮುತ್ತಿನಪೆಂಡೆ ಮಠದ ರುದ್ರಮುನಿ ಶ್ರೀ, ಬಸವ ಬಳಗದ ಅಧ್ಯಕ್ಷ ಡಾ.ಶಿವಪ್ರಕಾಶ, ತಾಲೂಕು ಬಿಜೆಪಿ ಅಧ್ಯಕ್ಷ ಆರ್.ಸಿ.ಪಂಪನಗೌಡ, ಬಿಜೆಪಿ ಯುವ ಮೋರ್ಚಾದ ತಾಲೂಕಾಧ್ಯಕ್ಷ ಎಂ.ಎಸ್.ಸಿದ್ದಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಹಾಗಲೂರು ಮಲ್ಲನಗೌಡ ಹಾಗೂ ಇನ್ನಿತರರು ಇದ್ದರು.
ವರದಿ .ಶ್ರೀನಿವಾಸ ನಾಯ್ಕ
Join The Telegram | Join The WhatsApp |