ಕಿಲ್ಲಾತೊರಗಲ್ಲ: ಬೆಳಗಾವಿ ಜಿಲ್ಲೆ , ರಾಮದುರ್ಗ ತಾಲೂಕಿನ ಪಾವನ ಸುಕ್ಷೇತ್ರ ಕಿಲ್ಲಾತೊರಗಲ್ಲದ ಪ್ರಾಚೀನ ಕಾಲದ ಶ್ರೀ ಪವಾಡ ಬಸವೇಶ್ವರ ದೇವರ ಪಲ್ಲಕ್ಕಿ
ಉತ್ಸವವು ಶ್ರಾವಣ ಮಾಸದ ಕೊನೆಯ ಸೋಮವಾರ ದಿ.11 ರಂದು ವಿವಿಧ ಧಾರ್ಮಿಕ ಪೂಜೆ , ಪುನಸ್ಕಾರಗಳ ಮೂಲಕ ವಿಜ್ರಂಭಣೆಯಿಂದ ನೆರವೇರಲಿದೆ.
ಹಿಂದೂಗಳಿಗೆ ಅತ್ಯಂತ ಪವಿತ್ರವಾಗಿರುವ ಈ ಶ್ರಾವಣ ಮಾಸವನ್ನು ಆ ಪರಮ ಶಿವನ ಮಾಸವೆಂದು ಭಕ್ತಾಧಿಗಳು ಶೃದ್ಧಾ , ಭಕ್ತಿಯಿಂದ ಆಚರಿಕೊಂಡು ಬರುತ್ತಿರುವುದು ಇಂದು , ನಿನ್ನೆಯದೇನಲ್ಲ , ಈ ಕಾರಣದಿಂದಾಗಿಯೇ ಶ್ರಾವಣ ಮಾಸದ ಆರಂಭದಿಂದ ಮುಕ್ತಾಯದ ವರೆಗೂ ಊರಲ್ಲಿನ ಮಂದಿರ , ಮಠ , ಗುಡಿ ,ದೇವಸ್ಥಾನಗಳಲ್ಲಿ ಅವ್ಯಾಹತವಾಗಿ ಹರನಾಮ ಸ್ಮರಣೆ, ಭಜನೆ, ಪುರಾಣ – ಕೀರ್ತಣೆ, ಹಾಗೂ ಪೂಜೆ, ದೇವತಾ ಆರಾಧನೆಯಂಥ ಧಾರ್ಮಿಕ ಕಾರ್ಯಕ್ರಮಗಳು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿವೆ . ಈ ದಿಶೆಯಲ್ಲಿ ಕಿಲ್ಲಾತೊರಗಲ್ಲದ ಶ್ರೀ ಪವಾಡ ಬಸವೇಶ್ವರ ಮೂರ್ತಿಗೆ ಶ್ರಾವಣ ಮಾಸದ ಆರಂಭದಿಂದಲೂ ಪ್ರತಿನಿತ್ಯ ಬೆಳಿಗ್ಗೆ ” ರುದ್ರಾಭಿಷೇಕ ಪೂಜೆಯು ” ವೇದಿಕೆಯ ಶಾಸ್ತ್ರಿಗಳಿಂದ ನಡೆದುಕೊಂಡು ಬಂದಿದ್ದು ಶ್ರಾವಣ ಮಾಸದ ಕೊನೆಯ ಸೋಮವಾರ ದಿ.11 ರಂದು ಶ್ರೀ ಪವಾಡ ಬಸವೇಶ್ವರ ಪಲ್ಲಕ್ಕಿ ಮಹೋತ್ಸವದ ಮೂಲಕ ಮಂಗಲಗೊಳ್ಳಲಿದೆ. ಮಹಾಮಂಗಳಾರುತಿ ತರುವಾಯ ” ಮಹಾಪ್ರಸಾದ ” ವಿತರಣೆ ಜರುಗುವುದು.
ಕಾರಣ ಕಿಲ್ಲಾತೊರಗಲ್ಲದ ಶ್ರೀ ಪವಾಡ ಬಸವೇಶ್ವರನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗುರುವಿನ ಪಲ್ಲಕ್ಕಿ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀಗುರುವಿನ ಕೃಪಾಶೀರ್ವಾದಕ್ಕೆ ಪಾತ್ರರಾಗುವಂತೆ ಈ ಮೂಲಕ ಭಕ್ತಾಧಿಗಳ ಪರವಾಗಿ ಕೋರಲಾಗಿದೆ.