ಮೊಳಕಾಲ್ಮುರು-ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ನಾಗಸಮುದ್ರ ಗ್ರಾಮದ ಯಾದವ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರು ಸೇರಿ ನಾಗಸಮುದ್ರದ ಗೊಲ್ಲರಹಟ್ಟಿಯಲ್ಲಿ ಬಹಳ ಭಕ್ತಿ ಭಾವದಿಂದ ಆಚರಣೆ ಮಾಡಲಾಯಿತು.
ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಭಾರತ ದೇಶದಲ್ಲಿ ಶ್ರಾವಣ ಮಾಸದಲ್ಲಿ ಅಷ್ಟಮಿಯಂದು ಆಚರಿಸಲ್ಪಡುವ ಪವಿತ್ರವಾದ ಮತ್ತು ಬಹಳ ಸಂಭ್ರಮ ಸಡಗರದಿಂದ ಆಚರಿಸಲ್ಪಾಡುವ ದಿನ. ಶ್ರೀಕೃಷ್ಣ ಹುಟ್ಟಿದ ದಿನವನ್ನು ಜನ್ಮಾಷ್ಠಮಿಯ ಅಥವಾ ಗೋಕುಲಾಷ್ಟಮಿ ಎಂದು ಸಹ ಕರೆಯುತ್ತಾರೆ. ಶ್ರಾವಣ ಮಾಸದ ಅಷ್ಟಮಿಯ ಮಧ್ಯ ರಾತ್ರಿಯಲ್ಲಿ ವಾಸುದೇವನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ದೇವಕಿ ಪುತ್ರ ಶ್ರೀಕೃಷ್ಣ ನನ್ನು ನಂದನ ರಾಜರ ಮನೆಯಲ್ಲಿ ಬಿಟ್ಟು ಬಿಟ್ಟು ಬರುತ್ತಾರೆ.
ಇಲ್ಲಿ ದೇವಕಿ ಯತ್ತ ತಾಯಿಯಾದರೆ ಯಶೋದೆ ಮಾತೇ ಸಾಕಿ ಬೆಳೆಸಿದ ಮಾತಿಯಾಗುತ್ತಾರೆ.ಇಂತಹ ಸುದಿನವನ್ನು ಭಾರತ ದೇಶದಲ್ಲಿ ಬಹಳ ಸಂಭ್ರಮ ಸಂತೋಷದಿಂದ ಆಚರಣೆ ಮಾಡುತ್ತಾರೆ. ಭಾರತ ದೇಶದ ಪ್ರತಿಯೊಂದು ಪಟ್ಟಣ ಹಳ್ಳಿಗಳಲ್ಲಿ ಪುಟ್ಟ ಪುಟ್ಟ ಶ್ರೀಕೃಷ್ಣ ರಾಧೇ ವೇಷಧಾರಿ ತಯಾರಿ ಮಾಡಿ ಬೀದಿ ಮೆರವಣಿಗೆ ಮಾಡಿ ಡೊಳ್ಳು ಕುಣಿತ ಮಾಡಿ ಸಿಹಿ ಹಂಚಿ ಭಕ್ತಿ ಭಾವದಿಂದ ಕಾರ್ಯಕ್ರಮ ಮಾಡುತ್ತಾರೆ.
ನಾಗಸಮುದ್ರ ಗ್ರಾಮದಲ್ಲಿ ಗೊಲ್ಲ ಸಮುದಾಯದ ಮುಖಂಡರು ಹಾಗೂ ಊರಿನ ಗ್ರಾಮಸ್ಥರು ಸೇರಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಿ, ಕಾರ್ಯಕ್ರಮಕ್ಕೆ ಆಗಮಿಸಿದ ಗ್ರಾಮಸ್ಥರೊಂದಿಗೆ ಪೂಜಾ ಕಾರ್ಯಕ್ರಮ ಮುಗಿಸಿ ಪ್ರಸಾದ ನೈವೇದ್ಯ ನೀಡಲಾಯುತು.
ಶ್ರೀಕೃಷ್ಣ ಜನ್ಮಾಷ್ಠಮಿಯ ಕಾರ್ಯಕ್ರಮದಲ್ಲಿ ನಾಗಸಮುದ್ರ ಗ್ರಾಮ ಪಂಚಾಯತಿ ಅಧ್ಯಕ್ಷರು ತಿಪ್ಪಮ್ಮ ಕೋ ಹನುಮಯ್ಯ, ಎನ್ ಬಿ ಗೋವಿಂದಪ್ಪ, ಗ್ರಾಮ ಪಂಚಾಯತಿ ಸದಸ್ಯರು ಮಲ್ಲಿಕಾರ್ಜುನ, ಶಬ್ಬೀರ್, ಮಾಜಿ ಗ್ರಾ ಪ ಅಧ್ಯಕ್ಷರು ಗೋವಿಂದಪ್ಪ, ನಿವೃತ್ತ ಶಿಕ್ಷಕರು ರಂಗಪ್ಪ, ನಿವೃತ್ತ ಶಿಕ್ಷಕರು ರಾಮಪ್ಪ ತಿಪ್ಪೇಸ್ವಾಮಿ ಮಾಜಿ ಅಧ್ಯಕ್ಷರು, ಅಡವಿ ಮಾರಪ್ಪ, ರಮೇಶ್, ನಾಗರಾಜ್, ಓಬಳೇಶ್ ನಾಯಕ ಎಸ್ ಟಿ ತಿಪ್ಪೇಸ್ವಾಮಿ ಬಸವರಾಜ್, ಗೋಪಾಲ, ಬಸವ ರಾಜು, ಚಿನ್ನನಾಗ ಚಿತ್ತಯ್ಯ, ಉಮೇಶ್, ಚಿಕ್ಕಣ್ಣ ಬೀಳಿಯಪ್ಪ ಈಶ್ವರ ಬಸಣ್ಣ, ಮುಂತಾದರು ಭಾಗವಹಿಸಿದ್ದರು..
ವರದಿ;- ಪಿಎಂ ಗಂಗಾಧರ