ಇಲಕಲ್ಲ :-ಮುರ್ತುಜ ಖಾದ್ರಿ ದುರ್ಗಾ ಕ್ಕೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ರಾದ ಡಾ: ಅನ್ವರ್ ಬಾಷಾ ಕೆ ಅವರ ನೇತ್ರತ್ವದಲ್ಲಿ ರಾಜ್ಯ ನಿಯೋಗ ಇಂದು ಇಲಕಲ್ಲ ನಗರದ ಪ್ರಸಿದ್ಧ ಹಜರತ್ ಮುರ್ತುಜ ಶಾ ಖಾದ್ರಿ ದರ್ಗಾ ಕ್ಕೆ ಭೇಟಿ ನೀಡಿದರು
ಇದೆ ಸಂದರ್ಭದಲ್ಲಿ ಅವರು ದರ್ಗಾ ದಲ್ಲಿ ನಡೆಯುತಿರುವ ಅಕ್ರಮಗಳ ದೂರುಗಳು ತೊಂದರೆಗಳ ಕುರಿತು ಕ್ರ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು ದರ್ಗಾ ದಲ್ಲಿ ಸುಜಿತ ವ್ಯವಸ್ಥೆ ಸರಿಯಾಗಿಲ್ಲ ತರಾಟೆ ತೊಗಂಡರು ಈಗಾಗಲೇ ವಕ್ಫ್ ಮಂಡಳಿ ಈ ದರ್ಗಾ ಕ್ಕೆ ಆಡಳಿತ ಅಧಿಕಾರಿಯನ್ನು ನೇಮಿಸಿದ್ದು ಅವರ ಮೇಲೆ ಹಿಂದಿನ ಆಡಳಿತ ಮಂಡಳಿ ಅವರು ತಡೆಯಾಜ್ಞೆ ತಂದಿದ್ದರು ಆದರೆ ಅವರು ಸೇಡ್ಡಗಳ ಹಾಗೂ ಕಾಂಪ್ಲೆಕ್ಸ್ ಗಳ ಬಾಡಿಗೆಗಳನ್ನು ತೆಗೆದುಕೊಂಡು ತಮ್ಮ ಅನುಕೂಲ ಕ್ಕೆ ಬಳಸಿ ಕೊಂಡಿದ್ದಾರೆ ಅದನ್ನು ಆದಷ್ಟು ಬೇಗ ಕಾನೂನು ಕ್ರಮ ಕೈಗೊಳ್ಳಲಾಗುಹುವುದು ಎಂದು ತಿಳಿಸಿದರು
ಇದೆ ಸಂದರ್ಭದಲ್ಲಿ ರಾಜ್ಯ ವಕ್ಫ್ ಮಂಡಳಿ ಸದಸ್ಯರಾದ ಹಾಗೂ ವಕೀಲರಾದ ಆಸೀಫ ಅಲಿ ಶೇಖ ಬಾಗಲಕೋಟ ಜಿಲ್ಲಾಧಕ್ಷರಾದ ಮೆಹಬೂಬ್ ಸರಕಾವಸ್ ಕರ್ನಾಟಕ ರಾಜ್ಯ ಮುಸ್ಲಿಮ್ ಯೂನಿಟಿ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ ಕಲ್ಬುರ್ಗಿ ಹಾಗೂ ವಕ್ಫ್ ಅಧಿಕಾರಿಗಳಾದ ಶಭಾನ ಹಾಗೂ ಮಸ್ತಾನ್ ನದಾಫ್ ಹಾಗೂ ಹಾಜಿ ಮಲಿಕ್ ಸಾಬ ಬೀಳಗಿ ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು
ವರದಿ.ದಾವಲ್.ಶೇಡಂ.