Join The Telegram | Join The WhatsApp |
ಬೆಳಗಾವಿ : ನಮ್ಮ ಭಾರತ ವೈಭವ ದಿನಪತ್ರಿಕೆಯಲ್ಲಿ ಕಿವುಡು ಮಕ್ಕಳ ಸರಕಾರಿ ಶಾಲೆ ವಿದ್ಯಾಗಿರಿ ಬೆಳಗಾವಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ದಿವ್ಯಾಂಗ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವರದಿಯನ್ನು ಪ್ರಕಟಿಸಲಾಗಿತ್ತು.
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಮಹಿಳೆಯರ ಮತ್ತು ಮಕ್ಕಳ ಇಲಾಖೆ ಬೆಳಗಾವಿ ಎಚ್ಚೆಚ್ಚುಕೊಳ್ಳದೆ ಬೇಜವಾಬ್ದಾರಿತನದಿಂದ ವರ್ತಿಸಿತ್ತು. ದಿನಪತ್ರಿಕೆಯ ವರದಿಯನ್ನು ಗಮನಿಸಿ ಕರ್ನಾಟಕ ಸಮತಾ ಸೈನ್ಯ ಬೆಳಗಾವಿ ಸಂಘಟನೆಯ ಪದಾಧಿಕಾರಿಗಳು ಈ ಶಾಲೆಗೆ ಭೇಟಿ ನೀಡಿ ಶಾಲೆಯ ಅವ್ಯವಸ್ಥೆಯನ್ನು ಗಮನಿಸಿ ಹೋರಾಟ ಮಾಡಿ ಮಾನ್ಯ ಜಿಲ್ಲಾಧಿಕಾರಿ ಬೆಳಗಾವಿ , ಬಸವರಾಜು ಉಪನರ್ದೇಶಕರು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ಇವರಿಗೆ ಹಾಗೂ ನಾಮದೇವ ಬೀಲಕರ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳು ಬೆಳಗಾವಿ ಇವರಿಗೆ ಮನವಿ ನೀಡಿ ತ್ವರಿತವಾಗಿ ಶಾಲೆಯ ಮಕ್ಕಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಲಾಯಿತು.
ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಿ ದಿವ್ಯಾಂಗ ಮಕ್ಕಳಿಗೆ ನ್ಯಾಯ ಒದಗಿಸಲಾಗುವುದು.
ಈ ಸಂದರ್ಭದಲ್ಲಿ ಸಂಜಯ್ ಪವಾರ, ಬಾಬು ಉಳವಿ, ಪ್ರವೀಣ ಸನದಿ, ಜಯಶ್ರೀ ಅಲಕುಂಡೆ, ಮಾರ್ಕಂಡೆಯ ಹುದಲಿ, ಮಲ್ಲೇಶ್ ದಾಸರ, ಮಹಾವಿರ ಹೂಲಿ, ಈಶ್ವರಗೌಡ ಪಾಟೀಲ್, ರವಿಕುಮಾರ್ ಜಗಮೈನವರ ಹಾಗೂ ಅನೇಕ ದಲಿತ ಮುಖಂಡರು ಉಪಸ್ಥಿತರಿದ್ದರು.
ಶಿವಾಜಿ ಎನ್ ಬಾಲೇಶಗೋಳ
Join The Telegram | Join The WhatsApp |