ಸಿರುಗುಪ್ಪ : –ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ನಗರ ಮತ್ತು ತಾಲೂಕಿನ ವಿವಿಧ ವಲಯ ಮಟ್ಟದಲ್ಲಿ ಜ್ಞಾನವಿಕಾಸ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರಿಗೆ 3ದಿನದ ಅಧ್ಯಯನದ ಪ್ರವಾಸಕ್ಕೆ ಯೋಜನೆವತಿಯಿಂದ ಕಳುಹಿಸಲಾಯಿತು.
ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಮೇಲ್ವಿಚಾರಕರಾದ ಪ್ರಭು ಹಿರೇಮಠ್ ಅವರು ಮಾತನಾಡಿ ಶ್ರೀ ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ 68ಜನ ಸದಸ್ಯರಿಗೆ ಅಧ್ಯಯನ ಪ್ರವಾಸದಲ್ಲಿ ರತ್ನಮಾನಸ ಗುರುಕುಲ ಶಿಕ್ಷಣ ಪದ್ದತಿ, ಸಿದ್ದವನ ನರ್ಸರಿ, ಮಂಜುಷಾ ವಸ್ತು ಸಂಗ್ರಹಾಲಯ, ಹಳೇಕಾರುಗಳ ಸಂಗ್ರಹಾಲಯಗಳ ವೀಕ್ಷಣೆ ವ್ಯವಸ್ಥೆ ಕಲ್ಪಿಸಲಾಗಿದೆ.
ಅಧ್ಯಯನದ ವೇಳೆ ಕೌಶಲ್ಯಾಭಿವೃದ್ದಿ ತರಬೇತಿ, ಮಾದರಿ ಕೃಷಿ ತಾಕು, ಲಾಭದಾಯಕ ಹೈನುಗಾರಿಕೆ ಹಾಗೂ ಸ್ವಉದ್ಯೋಗಾವಲಂಬಿಗಳ ಅನುಭದ ಉಪನ್ಯಾಸ ನೀಡಲಾಗುವುದೆಂದರು.
ಇದೇ ವೇಳೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಪ್ರಿಯಾ, ವಲಯ ಮೇಲ್ವಿಚಾರಕಿ ರೂಪಾ, ಹಾಗೂ ವಿವಿಧ ವಲಯಗಳ ಮೇಲ್ವಿಚಾರಕಿಯರು ಇದ್ದರು.
ವರದಿ ಶ್ರೀನಿವಾಸ ನಾಯ್ಕ