ಸಿರುಗುಪ್ಪ :– ತಾಲೂಕಿನ ಕೆಂಚನಗುಡ್ಡದಲ್ಲಿ ತುಂಗಾಭದ್ರ ನದಿ ತೀರದಲ್ಲಿರುವ ಶ್ರೀ ವಸುದೇಂದ್ರ ತೀರ್ಥರ ಬೃಂದಾವನಕ್ಕೆ ರವಿವಾರ ಸಂಜೆ ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿಗಳಾದ 1008 ಶ್ರೀ ಸುಬುದೇಂದ್ರತೀರ್ಥ ಶ್ರೀಪಾದಂಗಳವರು ಬೇಟಿ ನೀಡಿ ವಸುದೇಂದ್ರ ತೀರ್ಥರ ಆರಾಧನೆಯ ಪೂರ್ವ ಸಿದ್ದತೆಯನ್ನು ವೀಕ್ಷಣೆಯೊಂದಿಗೆ ಆರಾಧನೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಶ್ರೀಗಳು ದಿನಾಂಕ 3, 4 ಹಾಗೂ 5ನೇ ನವೆಂಬರ್ನಲ್ಲಿ ನಡೆಯುವ ಪೂರ್ವಾರಾಧನೆ, ಮದ್ಯರಾಧನೆ, ಉತ್ತರಾಧನೆಯ ಕಾರ್ಯಕ್ರಮವನ್ನು ಗ್ರಾಮ, ನಗರ ಸೇರಿದಂತೆ ಸುತ್ತಲಿನ ಎಲ್ಲಾ ಗ್ರಾಮಸ್ಥರು ಭಾಗಿಯಾಗಿ ದಾಸವಾಣಿ, ಭಜನೆಯ ಮೂಲಕ ಆರಾಧನೆ ವಿಜೃಂಭಣೆಯಿ0ದ ನೆರವೇರಿಸಬೇಕೆಂದರು.
ಅನ್ನಸಂತರ್ಪಣೆ, ವಿಶೇಷ ಅಲಂಕಾರ, ಪುಷ್ಪಾರ್ಕ್ಯಯೋಗ ಕ್ಷೀರಾಭಿಷೇಕ ಸೇವಾ, ಹಸ್ತೋದಕ ಸೇವೆ, ಪಂಚಾಮೃತಾಭಿಷೇಕ ಸೇವೆ, ಹಾಗೂ ಇನ್ನಿತರ ಸೇವೆಗಳಿಗೆ ಭಕ್ತಾದಿಗಳು ಮುಂದೆ ಬಂದು ತಮ್ಮ ಧನ ಕನಕಾದಿಗಳ ಮೂಲಕ ಮುಂದೆ ಬಂದು ಶ್ರೀ ವಸುದೇಂದ್ರ ತೀರ್ಥರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಿಳಿಸಿದರು.
ಸ್ಥಳೀಯ ಮುಖಂಡರು ಇಲ್ಲಿನ ಜನಪ್ರತಿನಿಧಿಗಳು ಆರಾಧನೆಗಾಗಿ ದೂರದಿಂದ ಬರುವ ಭಕ್ತಾದಿಗಳು ತಂಗಲು ಸೂಕ್ತ ವ್ಯವಸ್ಥೆಯನ್ನು ಒದಗಿಸುವಂತೆ ಸೂಚಿಸಿದರು.
ಇದೇ ವೇಳೆ ಗಿರಿ ಆಚಾರ್ಯ, ಬೃಂದಾವನದ ಆರ್ಚಕ ಮತ್ತು ವ್ಯವಸ್ಥಾಪಕ ವೆಂಕಟೇಶ ಆಚಾರ್ಯ, ಭಕ್ತ ವೃಂದದವರಾದ ಮುರುಳಿಧರ ಆಚಾರ್ಯ, ಇನ್ನಿತರಿದ್ದರು.
ವರದಿ.ಶ್ರೀನಿವಾಸ ನಾಯ್ಕ