ನಿಪ್ಪಾಣಿ:- ಬೆಲೆ ಘೋಷಣೆಗೆ ಆಗ್ರಹಿಸಿ ‘ಸ್ವಾಭಿಮಾನಿ’ ರೈತ ಸಂಘದ ವತಿಯಿಂದ ಕಬ್ಬು ಸಾಗಿಸುತ್ತಿರುವ ಟ್ರಾಕ್ಟರ್ ವಾಹನಗಳನ್ನು ರಸ್ತೆಯ ಮದ್ಯ ತಡೆದು ಸರ್ಕಾರದ ವಿರುದ್ಧ ಸ್ಥಳೀಯ ಜನಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಸದಸ್ಯರ ವಿರದ್ಧ ಘೋಷಣೆ ಕೂಗಿದರು.
ಕಳೆದ ವರ್ಷದ ಕಬ್ಬಿಗೆ ಪ್ರತಿ ಟನ್ಗೆ 3500 ರೂಪಾಯಿ ಬೆಲೆ ಘೋಷಿಸಿ, ಈ ಹಂಗಾಮಿನಲ್ಲಿ ಕಟಾವು ಆರಂಭಿಸುವಂತೆ ಸ್ವಾಭಿಮಾನಿ ರೈತರ ಸಂಘಟನೆ ಆಗ್ರಹಿಸಿತ್ತು. ಆದರೆ ಕೆಲವು ಸಕ್ಕರೆ ಕಾರ್ಖಾನೆಗಳು ಈ ಹಂಗಾಮಿನಲ್ಲಿ ದರ ಪ್ರಕಟಿಸದೇ ಆರಂಭಿಸಿವೆ.
ಹೀಗಾಗಿ ರೈತ ಸಂಘದ ಕಾರ್ಯಕರ್ತರು ಕಾರ್ಖಾನೆ ಸಮೀಪ ಕಬ್ಬು ಸಾಗಣೆ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಸ್ವಾಭಿಮಾನಿ ರೈತರ ಸಂಘಟನೆ ಹಾಗೂ ಇತರೆ ರೈತ ಸಂಘಟನೆಗಳು ಈ ಹಂಗಾಮಿನ ಕಬ್ಬಿನ ಬೆಲೆ ಘೋಷಿಸಿದ ನಂತರವೇ ಕಾರ್ಖಾನೆಗಳನ್ನು ಆರಂಭಿಸಬೇಕು.
ಜೊತೆಗೆ ಕಳೆದ ಹಂಗಾಮಿನ ಕಬ್ಬಿಗೆ ಪ್ರತಿ ಟನ್ ಗೆ 400 ರೂಪಾಯಿ ಯಂತೆ ಕಂತು ಪಾವತಿಸಬೇಕು ಎಂದು ಒತ್ತಾಯಿಸಿ. ಈ ಭಾಗದ ಕಾರ್ಖಾನೆಗಳು ದರ ಪ್ರಕಟಿಸದೆ ಸೀಜನ್ ಮುಗಿಸುತ್ತಿವೆ,
ನಿಪ್ಪಾಣಿ ಯಲ್ಲಿ ದರವನ್ನು ಘೋಷಿಸದೆ ಕಬ್ಬು ಕಡಿಯಲು ಆರಂಭಿಸಿದ್ದಕ್ಕೆ ಸ್ವಾಭಿಮಾನಿ ರೈತ ಸಂಘದ ಕಾರ್ಯಕರ್ತರು ವಾಹನಗಳನ್ನು ತಡೆದರು.
ಹೀಗಾಗಿ ಗುರುವಾರ ಕಬ್ಬು ತುಂಬಿದ ವಾಹನಗಳನ್ನು ಸಂಘಟನೆ ಕಾರ್ಯಕರ್ತರು ತಡೆದು ಸ್ವಲ್ಪ ಸಮಯದಲ್ಲೇ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕ ರಾಮಗೊಂಡ ಪಾಟೀಲ ಸಂಘಟನೆಯ ಕಾರ್ಯಕರ್ತರನ್ನು ಸಂಪರ್ಕಿಸಿ, ಎರಡು ದಿನದಲ್ಲಿ ಈ ಹಂಗಾಮಿನ ದರ ಘೋಷಣೆ ಜತೆಗೆ ಹಿಂದಿನ ಬಿಲ್ ಬಗ್ಗೆ ರೈತರಿಗೆ ತಿಳಿಸಲಾಗುವುದು ಎಂದು ತಿಳಿಸಿ ಪ್ರತಿಭಟನೆ ಹಿಂಪಡೆಯಲು ವಿನಂತಿಸಿದ ಮೇರೆಗೆ ಪ್ರತಿಭಟನೆ ಹಿಂದಕ್ಕೆ ಪಡೆದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಎನ್ ಐ ಖೋತ್, ತಾತ್ಯಾಸಾಹೇಬ ಪಾಟೀಲ, ಸಚಿನ ಪಾಟೀಲ, ಅಜಿತ ಪಾಟೀಲ, ಜೈರಾಮ್ ಮಿರಜಕರ, ಬಾಬಾಸಾಹೇಬ ಮಗದುಮ, ಸುಧಾಕರ ಮಾನೆ, ಆನಂದ ಅಂಬೇಕರ, ಧನಾಜಿ ಕಾಂಬಳೆ, ಸಂಜಯ ಕಾಂಬಳೆ, ನೇತಾಜಿ ಕೋಳಿ, ಅನಿಲ ಕಾಪ್ಸೆ, ಬಾಲಕೃಷ್ಣ ಬೇಡಕಿಹಾಳೆ, ಶಕುಂತಲಾ ತೆಲಿ, ಪಲ್ಲವಿ ಬೇಡಕಿಹಾಳೆ ಹಾಗೂ ರೈತ ಸಂಘದ ಕಾರ್ಯಕರ್ತರು , ಪದಾಧಿಕಾರಿಗಳು ಉಪಸ್ಥತರಿದ್ದರು
ವರದಿ:- ರಾಜು ಮುಂಡೆ