Join The Telegram | Join The WhatsApp |
ಕೇಂದ್ರ ಕಾರಾಗ್ರಹ ಮುಖ್ಯ ವೀಕ್ಷಕಿ ಶ್ರೀದೇವಿ ಗಂಗಾಧರಯ್ಯ ಜಡಿಮಠ ಅವರು ಮುಖ್ಯಮಂತ್ರಿ ಪದಕ ಪ್ರಶಸ್ತಿಗೆ ಆಯ್ಕೆಯಾಗಿರುವದು ಹೆಮ್ಮೆಯ ವಿಷಯವಾಗಿದೆ.
ಧಾರವಾಡ : ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಬೆಂಗಳೂರು ಇವರು ರಾಜ್ಯ ಮಟ್ಟದ ಬೇರೆ ಬೇರೆ ಕಾರಾಗೃಹಗಳಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ 2022ನೇ ಸಾಲಿನ ಮುಖ್ಯ ಮಂತ್ರಿಪದಕ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಬಿಡುಗಡೆ ಮಾಡಿರುತ್ತಾರೆ.
ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಮುಖ್ಯ ವೀಕ್ಷಕರಾಗಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀದೇವಿ ಗಂಗಾಧರಯ್ಯ ಜಡಿಮಠ ಇವರು ಆಯ್ಕೆಯಾಗಿದ್ದು ಇಲಾಖೆಯ ಗೌರವ ಹೆಚ್ಚಿದಂತಾಗಿದೆ.
ಸದರಿಯವರು ಕೇಂದ್ರ ಕಾರಾಗೃಹ ಬೆಂಗಳೂರು, ಬೆಳಗಾವಿ ಉಪ ಕಾರಾಗೃಹ ಹುಬ್ಬಳ್ಳಿ ಸೇರಿ ಒಟ್ಟು 15 ವರ್ಷ ಸೇವೆ ಸಲ್ಲಿಸಿರುತ್ತಾರೆ. ಅವರ ಈ ಯಶಸ್ಸಿಗೆ ಸಂಸ್ಥೆಯ ಅಧೀಕ್ಷರಾದ ಎಂ.ಎ. ಮರಿಗೌಡ ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
ವರದಿ: ವಿನಾಯಕ ಏನ್ ಗುಡ್ಡದಕೇರಿ
Join The Telegram | Join The WhatsApp |