Join The Telegram | Join The WhatsApp |
ಜಿಗೇನಹಳ್ಳಿ: ಶೀಲ ಶಂಕಿಸಿ ಪತ್ನಿ ಕೊಂದ ಪತಿ ನೇಣಿಗೆ ಶರಣು- ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು, ಚೋರನೂರು ಪೊಲೀಸ್ ಠಾಣಾವ್ಯಾಪ್ತಿಯ ಜಿಗೇನಹಳ್ಳಿ ಗ್ರಾಮದಲ್ಲಿ. ಹೆಂಡತಿಯ ಶೀಲ ಶಂಕಿಸಿ ಪತ್ನಿ ಕೊಲೆ ಮಾಡಿದ ಪತಿ ತಾನು ನೇಣುಹಾಕಿಕೊಂಡು ಮೃತಪಟ್ಟ ಪ್ರಕರಣ ಅ27ರಂದು ತಡ ರಾತ್ರಿ ಜರುಗಿದೆ.
ಗ್ರಾಮದ ಕುಮಾರಸ್ವಾಮಿ(40) ತನ್ನ ಪತ್ನಿ ರೇಖಾ(30)ಳನ್ನು ಕುಡುಗೋಲಿನಿಂದ ಕೊಲೆ ಮಾಡಿ ನಂತರ ತಾನು ನೇಣಿಗೆ ಶರಣಾದ ಪತಿಯಾಗಿದ್ದಾನೆ. ತನ್ನ ಪತ್ನಿ ಯಲ್ಲಿ ಶಂಕೆ ಇದ್ದು ಇದೇ ಕಾರಣಕ್ಕೆ ಪತ್ನಿಯನ್ನ ಕೊಲೆಗೈದು ನಂತರ ಪತಿ ತಾನು ನೇಣಿಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಚೋರನೂರು ಪೊಲೀಸರು ದೌಡಾಯಿಸಿದ್ದು, ಬಳ್ಳಾರಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟ್ಟಿ ನೀಡಿ ಪರಿಶೀಲೀಸಿದ್ದಾರೆ. ಸಂಡೂರು ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ವರದಿ : ವಿ.ಜಿ.ವೃಷಭೇಂದ್ರ
Join The Telegram | Join The WhatsApp |