This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಮೊಳಕಾಲ್ಮೂರು ಪಟ್ಟಣ ಪಂಚಾಯಿತಿಯ 9ನೇ ವಾರ್ಡಿನಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ

Join The Telegram Join The WhatsApp

ಮೊಳಕಾಲ್ಮೂರು:  ಪಟ್ಟಣ ಪಂಚಾಯಿತಿಯ 9ನೇ ವಾರ್ಡಿನ ಕೋನಸಾಗರ ರಸ್ತೆಯಲ್ಲಿರುವ ಬಸ್ ನಿಲ್ದಾಣದ ಸುತ್ತ ಮುತ್ತ “ನಮ್ಮ ಚಿತ್ತ ಸ್ವಚ್ಛತೆಯತ್ತ” ಎಂಬ ಘೋಷವಾಕ್ಯದಡಿಯಲ್ಲಿ ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ, ಮೂಲದಲ್ಲಿಯೇ ಕಸ ವಿಂಗಡಣೆ ಮಾಡುವ ಬಗ್ಗೆ, ಪ್ಲಾಸ್ಟಿಕ್ ಬಳಕೆ ನಿಷೇಧ, ಮನೆಯಲ್ಲಿಯೇ ಗೊಬ್ಬರ ತಯಾರಿಸುವ ವಿಶೇಷವಾಗಿ (5 ಗಳಾದ REFUSE, REDUCE, REUSE, RECYCLE, RECOVER)ರಫ್ಯೂಸ್ ರಿಸೈಕಲ್ ರಿಕವರಿ ಕುರಿತು ಜನಜಾಗೃತಿ ಸ್ವಚ್ಛ ಭಾರತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀ ಟಿ ರವಿ ಕುಮಾರ್ ರವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಶ್ರೀ ಟಿ ರವಿಕುಮಾರ್ ರವರು ಮಾತನಾಡಿ…

ಮೊಳಕಾಲ್ಮೂರು ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇದಿಸಿದ್ದು ಸಾರ್ವಜನಿಕರು ಮತ್ತು ಉದ್ದಿಮೆದಾರರು ಪ್ಲಾಸ್ಟಿಕ್ ನ್ನು ಬಳಸಬಾರದು ಹಾಗೂ ಮಾರಾಟ ಮಾಡಬಾರದು. ಸಾರ್ವಜನಿಕರು ಕಡ್ಡಾಯವಾಗಿ ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ ಪಟ್ಟಣ ಪಂಚಾಯಿತಿ ವಾಹನಕ್ಕೆ ನೀಡಬೇಕು. ರಸ್ತೆಯಲ್ಲಿ ಚರಂಡಿಯಲ್ಲಿ ಕಸವನ್ನು ಎಸೆಯುವಂತಿಲ್ಲ. ಪಟ್ಟಣದಲ್ಲಿನ ಎಲ್ಲಾ ಉದ್ದಿಮೆದಾರರು ಕಡ್ಡಾಯವಾಗಿ ಎರಡು ಡಸ್ಟ್ ಬಿನ್ ನ್ನು ಇಡಬೇಕು. ಎಂದು ತಿಳಿಸಿದರು .

ಈ ಸಂದರ್ಭದಲ್ಲಿ, ಸದಸ್ಯರಾದ ಶ್ರೀಮತಿ ಭಾಗ್ಯಮ್ಮ, ಮುಖಂಡರಾದ ಭೀಮಣ್ಣ ಮತ್ತು ಶಿಕ್ಷಕರಾದ ಲತೀಫ್ ಸಿಬ್ಬಂದಿಗಳಾದ ದೇವೇಂದ್ರಪ್ಪ, ಶ್ರೀನಿವಾಸ್, ಪೆನ್ನೊಬಳಿ, ಮರಿಸ್ವಾಮಿ, ಕೃಷ್ಣಮೂರ್ತಿ, ಮತ್ತು ಪೌರ ಕಾರ್ಮಿಕರು ಮತ್ತು ವಾಹನ ಚಾಲಕರು ಉಪಸ್ಥಿತರಿದ್ದರು.

ಪಿಎಂ ಗಂಗಾಧರ್ 


Join The Telegram Join The WhatsApp
Bharath Vaibhav
the authorBharath Vaibhav

Leave a Reply