Join The Telegram | Join The WhatsApp |
ಬೈಲಹೊಂಗಲ : ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ರಾಷ್ಟ್ರೀಯ ಯುವ ದಿನದ ಮಹತ್ವದ ಕುರಿತು ಶಿಕ್ಷಕರಾದ ಸುನೀಲ ಭಜಂತ್ರಿ ಮಾತನಾಡಿದರು. ವಿದ್ಯಾರ್ಥಿನಿಯಾದ ಪೃಥ್ವಿ ಗರಗದ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳನ್ನು ತಿಳಿಸಿಕೊಟ್ಟಳು. ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ, ಶಿಕ್ಷಕರಾದ ಪ್ರವೀಣ ಗುರುನಗೌಡರ, ಶಿವಾನಂದ ಬಳಿಗಾರ, ಶ್ರೀಪಾಲ ಚೌಗಲಾ, ವೀರೇಂದ್ರ ಪಾಟೀಲ ಉಪಸ್ಥಿತರಿದ್ದರು.
ವರದಿ : ದುಂಡಪ್ಪ ಹೂಲಿ
Join The Telegram | Join The WhatsApp |