ಸಿರುಗುಪ್ಪ : –ತಾಲೂಕಿನ ತಾಳೂರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಸದಾಕಾಲ ಪ್ಲಾಸ್ಟಿಕ್, ಕಸ, ಮದ್ಯದ ತ್ಯಾಜ್ಯಗಳಿಂದ ಶುದ್ದ ಪರಿಸರಕ್ಕೆ ಮಾರಕವಾಗಿ ಮಾಲಿನ್ಯದಿಂದ ಕೂಡಿತ್ತು.
ತಾಲೂಕು ಭಾಗದಿಂದ ಕೊನೆಯ ಹಾಗೂ ನೆರೆಯ ಆಂದ್ರದ ಗಡಿಭಾಗದಲ್ಲಿರುವ ಈ ಗ್ರಾಮವೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ0ದರೆ ತಪ್ಪಾಗಲಾರದು.
ಆಸ್ಪತ್ರೆಗೆ ಸೂಕ್ತ ತಡೆಗೋಡೆ ಇಲ್ಲದಿರುವುದರಿಂದ ಕೆಲವು ಕಿಡಿಗೇಡಿಗಳು ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಮಾಡುತ್ತಿರುವುದು ಒಂದೆಡೆಯಾದರೆ ಪಂಚಾಯಿತಿ ಕಾರ್ಯಾಲಯಕ್ಕೆ ಸಂಬ0ದಿಸಿದ ಶೌಚಾಲಯಗಳು ಬೀಗ ಹಾಕಿದ್ದರಿಂದ ಸಾರ್ವಜನಿಕರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವಂತಾಗಿದೆ.
ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ವೇಳೆ ಜಿಲ್ಲಾ ಕೇಂದ್ರಕ್ಕೆ ತೆರಳುವ ರೋಗಿಗಳಿಗೆ, ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಗ್ರಾಮದಲ್ಲಿ ಒಂದು ಬಸ್ ನಿಲ್ದಾಣವಿಲ್ಲದೇ ಮಳೆ ಬಿಸಿಲಿನಲ್ಲಿ ಇಲ್ಲವೇ ಖಾಸಗಿಯವರ ಅಂಗಡಿ ಮುಂಗಟ್ಟುಗಳ ಮುಂದೆ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.
ಸರಾಗವಾಗಿ ನೀರು ಹರಿಯುವ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಎಲ್ಲೆಂದರಲ್ಲೆ ಸೊಳ್ಳೆಗಳ ತಾಣವಾಗಿದ್ದರಿಂದ ಗ್ರಾಮಸ್ಥರಿಗೆ ತಾಪತ್ರಯ ತಪ್ಪದಾಗಿದೆ.
ಈ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ಹೊತ್ತ ಅಭಿವೃದ್ದಿ ಅಧಿಕಾರಿಗಳಾದ ಮಹಮದ್ ಖದೀರ್ ಅವರು ಪ್ರತಿಕ್ರಿಯಿಸಿ ಏನು ಮಾಡುವುದು ಎಷ್ಟು ಸ್ವಚ್ಛಗೊಳಿಸಿದರೂ ಕಸ ಬೀಳುತ್ತಿರುತ್ತದೆ, ಚರಂಡಿ ತುಂಬಿ ಹರಿಯುತ್ತೆ, ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇದು ಸಾಮಾನ್ಯವಾಗಿದೆಂದು ಹಾರಿಕೆ ಉತ್ತರ ನೀಡಿದರಲ್ಲದೇ ಸರ್ಕಾರದಿಂದ ಅನುದಾನವಿಲ್ಲದಂತಾಗಿದೆ ಮುಂದೇನಾದರೂ ಅನುದಾನ ಬಂದಲ್ಲಿ ಬಸ್ನಿಲ್ದಾಣ, ಆಸ್ಪತ್ರೆಗೆ ತಡೆಗೋಡೆ ನಿರ್ಮಿಸಲಾಗುವುದೆಂದರು.
ವರದಿ.ಶ್ರೀನಿವಾಸ ನಾಯ್ಕ