Join The Telegram | Join The WhatsApp |
ಬೆಳಗಾವಿ : ಮಂಗಳವಾರ ನಗರದ ಕ್ಯಾಂಪ್ ಪ್ರದೇಶದಲ್ಲಿ ಇರುವ ಬಿ ಇ ಸೊಸೈಟಿಯ ಎನ್ಎಸ್ ಪೈ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆದಿದೆ..
ಅರವಿಂದ ದೇಶಪಾಂಡೆ
ಆರ್ ಎಸ್ ಎಸ್ ಪ್ರಾಂತ ಸಹಸಂಘ ಸಂಚಾಲಕ ಉತ್ತರ ಕರ್ನಾಟಕ ಘಟಕ, ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳಿಗೆ ದೇಶ ಭಕ್ತಿ , ಹೆಮ್ಮೆ ರೂಡಿಸಿಕೊಳ್ಳಬೇಕು ಎಂದು ಹೇಳಿದರು, ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳಿಗೆ ಪ್ರೇರಣೆ ಆಗುತ್ತದೆ ಅಂದರು…
ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಅವಿನಾಶ ಪೋತದಾರ ಅವರು ಮಾತನಾಡಿ, ಮಕ್ಕಳು ಒಳ್ಳೆಯ ವಿಚಾರ,ಗುರಿಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು..
ಆದರ್ಶ ವಿದ್ಯಾರ್ಥಿಗಳ ಪ್ರಶಸ್ತಿ ವಿತರಿಸಲಾಯಿತು, ಅತಿಥಿಗಳನ್ನು ಸತ್ಕರಿಸಲಾಯಿತು.
ಸ್ವಾಗತ ಗೀತೆ, ಪ್ರಾರ್ಥನೆ, ನಾಡಗೀತೆಯಿಂದ ಪ್ರಾರಂಭವಾದ ಕಾರ್ಯಕ್ರಮ ವಿವಿಧ ಮನರಂಜನೆ ಹಾಗೂ ಸಂದೇಶ ಸಾರುವ ನಿಟ್ಟಿನಲ್ಲಿ ಕಲಾ ಹಬ್ಬದ ವಾತಾವರಣವೇ ರಮಣೀಯವಾಗಿತ್ತು.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ರಾಧಿಕಾ ನಾಯಿಕ ಸ್ವಾಗತ ಕೋರಿದರು,
ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿಯರಾದ ಹರ್ಷಾ ಕುಲಕರ್ಣಿ ಮತ್ತು ಸರಿತಾ ಕಾವಳೆ ನೆರವೇರಿಸಿದರು, ಸಂಚಾಲಕಿರಾದ ಶೋಭಾ ಜೋಶಿ ಮತ್ತು ಶ್ರೀದೇವಿ ಜೋಶಿ ಕಾರ್ಯಕ್ರಮದ ಸಂಯೋಜನೆ ಮಾಡಿದರು.
ವಿದ್ಯಾರ್ಥಿಗಳಿಂದ ಸುಂದರ ಬ್ಯಾಂಡ್ ಸೆಟ್ ಬಾರಿಸುವ ಮೂಲಕ ಅತಿಥಿಗಳನ್ನು ಸ್ವಾಗತಿಸಿ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಪಾಲಕರು,ಪೋಷಕರು ಮಕ್ಕಳ ಸಂತಸ ಹಕ್ಕಿಗಳಂತೆ ಕುಣಿಯುವ ಸಂಬ್ರಮ ನೋಡುವದೆ ಕಣ್ಣಿಗೆ ಹಬ್ಬದ ವಾತಾವರಣ ಆಗಿತ್ತು.
ಆಡಳಿತ ಮಂಡಳಿಯ ವರಿಷ್ಠರು ಆದ ಸುಧೀರ ಕುಲಕರ್ಣಿ,
ಅರವಿಂದ ಹುನಗುಂದ, ದೀಪಕ್ ಕುಲಕರ್ಣಿ , ಗ್ರಾಮೋಪಾಧ್ಯಾಯ, ಶಾಲಾ ಸಿಬ್ಬಂದಿ, ಪಾಲಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು…
ವರದಿ ಪ್ರಕಾಶ್ ಕುರಗುಂದ..
Join The Telegram | Join The WhatsApp |