@(ಇದು ರಾಜ್ಯದೆಲ್ಲೆಡೆಯ ವಿ- ವಿಚಿತ್ರಣವಾಗಿದೆ)
ಇತ್ತೀಗಷ್ಟೇ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ, ಗ್ರಾಮ ಪಂಚಾಯ್ತಿಗೆ ಚುನಾಯಿತರಾಗಿರುವ ಮಹಿಳೆಯ ಅಧಿಕಾರದಲ್ಲಿ. ಅವರ ಪರವಾಗಿ ಅವರ ಅನುಪಸ್ಥಿತಿಯಲ್ಲಿ ಅವರ ಪತಿ ಅಥವಾ ಸಂಬಂಧಿ, ಅಥವಾ ಮನೆಯ ಸದಸ್ಯರು ಅವರ ಬದಲಗಿ ಸ್ಥಾನದಲ್ಲಿ ಗುರುತಿಸಿಕೊಳ್ಳೋದು. ಸ್ಥಳೀಯ ಅಥವಾ ಯಾವುದೇ ಸಾರ್ವಜನಿಕ ಕ್ಷೇತ್ರದಲ್ಲಿ, ಅಧಿಕಾರದ ದುರುಪಯೋಗ ಹಾಗೂ ಹಸ್ತಕ್ಷೇಪ ನಡೆಸಲು ಅವಕಾಶ ನೀಡಿದ್ದು. ಮಹಿಳಾ ಜನಪ್ರತಿನಿಧಿಗಳ ಪರವಾಗಿ, ಪುರುಷರು ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ತೊಂದರೆ ನೀಡಿದ್ದು, ಸಾಕ್ಷ್ಯಾಧಾರಗಳ ಸಮೇತ ದೂರುಗಳು ಬಂದಲ್ಲಿ. ಆರೋಪ ಸಾಬೀತಾದಲದಲ್ಲಿ, ಅಂಥಹ ಮಹಿಳಾ ಜನ ಪ್ರತಿನಿಧಿಯ ಸದಸ್ಯತ್ವ ರದ್ದುಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ. ಸಂಬಂಧಿಸಿದಂತೆ ಹಲವೆಡೆಗಳಿಂದ ಬಂದ ಆರೋಪಗಳನ್ನು, ಗಂಭೀರ ವಾಗಿ ಪರಿಗಣಿಸಿದ ಪಂಚಾಯಿತಿ ರಾಜ್ಯ ಇಲಾಖೆಗೆ ,
1993ರ ಪ್ರಕರಣ 41(ಎ) ಮತ್ತು ಪ್ರಕರಣ 38(4)ರ ಅಡಿಯಲ್ಲಿ. ಸರ್ಕಾರ ಆರೋಪಿ ಮತ್ತು ಪ್ರತ್ಯಾರೋಪಿಗಳ ವಿಚಾರಣೆ ನಡೆಸಿ.
ಆರೋಪ ಸಾಬೀತಾದಲ್ಲಿ ನಿರ್ಧಾಕ್ಷಿಣ್ಯ ಶಿಸ್ಥು ಕ್ರಮ, ತಪ್ಪಿತಸ್ಥರ ವಿರುದ್ಧ ಶಿಸ್ಥು ಕ್ರಮ ಜರುಗಿಸುವಂತೆ. ಕಟ್ಟು ನಿಟ್ಟಿನ ಕ್ರಮ ಜಾರಿಗೆ ತರುವಂತೆ,
ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಮಹಿಳಾ ಕಾನೂನು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಮೀಸಲಾತಿ ನೆಪಕ್ಕೆ ಮಾತ್ರನಾ.!? -ವ್ಯವಸ್ಥೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಶೋಷಣೆ ಈ ರೀತಿಯಲ್ಲಿ ಜೀವಂತವಾಗಿದೆ, ಎಂದು ಸರ್ಕಾರಕ್ಕೆ ಈಗಾಗಲೇ ಮನವರಿಕೆ ಮಾಡಿಕೊಡಲಾಗಿದೆ. ಮೀಸಲಾತಿ ಕೇವಲ ದಾಖಲಾತಿಗಳಿಗೆ ಮಾತ್ರ, ಎಲ್ಲಾ ಪುರುಷ ಪ್ರಧಾನದ ಬಂಡುಕೋರುತನ ಜೀವಂತಿಕೆ. ಇದು ನಮ್ಮ ಸಂವಿಧಾನದಕ್ಕೆ ಹಾಗೂ ಕಾನೂನಿಗೆ ಮಾಡುವ, ತಿಳಿದು ತಿಳಿದು ಮಾಡುವ ಅಪಮಾನವಾಗಿದೆ.
ಸ್ವತಃ ಮನೆಯವರಿಂದಲೇ ಮಹಿಳೆಯ ಶೋಷಣೆ- ಶೋಷಣೆ ಮಾಡುತ್ತಿರುವುದು ಬೇರಾರು ಅಲ್ಲ, ಚುನಾಯಿತ ಮಹಿಳಾ ಜನಪ್ರತಿನಿಧಿಗಳ ಮನೆಯವರಿಂದಲೇ ಪ್ರಾರಂಭಗೊಂಡಂತಿದೆ ಎನ್ನುತ್ತಾರೆ ಮಹಿಳಾ ಕಾನೂನುತಜ್ಞರು. ಹಾಗಾದರೆ ಮಹಿಳಾ ಮೀಸಲಾತಿಯ ದೇಯೋದ್ದೇಶವಾದರೂ ಏನು.!? ಎಂಬ ಯಕ್ಷ ಪ್ರೆಶ್ನೆ ಮಹಿಳಾ ಪರ ಚಿಂತಕರದ್ದಾಗಿದೆ. ಇದಕ್ಕೆ ಪ್ರಜ್ಞಾವಂತ ನಾಗರೀಕರು ಹಾಗೂ ಮತದಾರ ಪ್ರಭುಗಳು, ಚುನಾವಣೆಯಲ್ಲಿ ಮತ ಚಲಾಯಿಸುವಾಗ ತಮ್ಮ ಜಾಣ್ಮೆ ತೋರಬೇಕಾಗುತ್ತದೆ.. ಈಗಾಗಲೇ ಆಯ್ಕೆ ಯಾಗಿರುವ ಮಹಿಳಾ ಜನಪ್ರತಿನಿಧಿಗಳಿಗೆ, ಈ ತರಹದ ಸಮಸ್ಯೆ ಎದುರಾದಲ್ಲಿ ಸಂಬಂಧಿಸಿದಂತೆ, ಸರ್ಕಾರ ಮಹಿಳಾ ಜನಪ್ರತಿನಿಧಿಗಳಿಗೆ ಸೂಕ್ತ ತರಬೇತಿ ನೀಡಬೇಕಿದೆ, ಮತ್ತು ಕಾನೂನು ಅರಿವು ನೆರವು ನೀಡಬೇಕು ಮತ್ತು ಕಟ್ಟು ನಿಟ್ಟಿನ ಶಿಸ್ಥು ಕ್ರಮದ ಸೂಚನೆ ನೀಡಬೇಕಾಗಿದೆ. ಮಹಿಳಾ ಹೋರಾಟಗಾರರು ಹಾಗೂ ಸಂಘಟನೆ, ಸಂಸ್ಥೆಗಳು ಮಹಿಳಾ ಜನಪ್ರತಿನಿಧಿಗಳಿಗೆ ಸೂಕ್ತ ತರಬೇತಿ ಕಾನೂನು ನೆರವು ಅರಿವು ನೀಡಬೇಕಾಗಿದೆ.
ಬಂಢ ಭ್ರಷ್ಟರಿಗೆ ಅರಿವು ಮೂಡಿಸಬೇಕಾಗಿದೆ.!?- ಸರ್ಕಾರ ಆದೇಶ ಹೊರಡಿಸಿದ ಕೂಡಲೇ ಅವ್ಯವಸ್ಥೆ ಸರಿಯಾಗದು, ಸಂಬಂಧಿಸಿದಂತೆ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷ್ಯಣ್ಯ ಕ್ರಮ ಜಾರಿಯಾಗುವಂತಾಗಬೇಕಿದೆಕೇವಲ ಮಹಿಳಾ ಜನಪ್ರತಿನಿಧಿಯನ್ನು ಗುರಿಯಾಗಿಸಿಕೊಂಡು, ಅವಳ ಸದಸ್ಯತ್ವ ರದ್ದು ಮಾಡೋದರಿಂದಾಗಿ ಅವಳ ತೇಜೋವಧೆ ಹಾಗೂ ಅಪಮಾನ ಹಾಗೂ ಪರೋಕ್ಷವಾಗಿ ಅಸಹಾಯಕಳನ್ನಾಗಿಸಿದಂತಾಗುತ್ತದೆ. ಇಂತಹ ಪ್ರಕರಣದಲ್ಲಿ ಅವರ ಪುರುಷರ ಪಾತ್ರ ಮಹತ್ವದ್ದಾಗಿರುತ್ತದೆ, ಇದಕ್ಕೆಲ್ಲಾ ಅವರೇ ಅವರೂ ಪ್ರತ್ಯಕ್ಷ ಹಾಗೂ ಪರೋಕ್ಷವಾಕಾರಣ ವಾಗಿರುತ್ತಾರೆ. ಕಾರಣ ಅವರನ್ನು ಮೊದಲನೇ ಪ್ರಮುಖ ಆರೋಪಿಯನ್ನಾಗಿಸಿ, ನಿರ್ಧಾಕ್ಷಿಣ್ಯ ಶಿಸ್ಥು ಕ್ರಮ ಕ್ರಮ ಜರುಗಿಸುವಂತಾಗಬೇಕಿದೆ. ಮಹಿಳಾ ಜನಪ್ರತಿನಿಧಿಗಳ ಹೆಸರಲ್ಲಿ, ಅವರ ಮನೆಯ ಪುರುಷರು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.
ಕೆಲ ಭ್ರಷ್ಟ ಅಧಿಕಾರಿಗಳು, ಬಕೆಟ್ ಹಿಡಿಯೋ ಕೆಲ ಪತ್ರಕರ್ತರು ಕಾರಣನಾ.!?- ಇದಕ್ಕೆಲ್ಲಾ ಕೆಲ ಭ್ರಷ್ಟ ಅಧಿಕಾರಿಗಳು, ಹಾಗೂ ಇವರಿಗೆಲ್ಲಾ ಪ್ರಚಾರ ನೀಡೋ ಭಂಡ, ಕಡು ಭ್ರಷ್ಟ ಬಕೇಟು ಹಿಡಿಯೋ ಕೆಲವೇ ಕೆಲ ಪತ್ರಕರ್ತರು ಪ್ರಮುಖ ಕಾರಣ ಎಂದು ಆರೋಪಿಸುತ್ತಾರೆ ಮಹಿಳಾ ಹೋರಾಟಗಾರರು. ಏಲ್ಲದಕ್ಕೂ ಪ್ರಮುಖ ಕಾರಣ ಬಿಡಿಗಾಸಿಗಾಗಿ, ಅಂಥ ಮೂರ್ಖ ಪತ್ರಕರ್ತರನ್ನ ಸಾಕುವ ಪ್ರಚಾರ ಕೈಂದ್ರಗಳು ಕಾರಣ. ಕೆಲ ಮಾದ್ಯಮ ಹಾಗೂ ಕೆಲ ಪತ್ರಿಕಾ ಕಚೇರಿಗಳು, ಕೆಲ ಭ್ರಷ್ಟ ಪತ್ರಕರ್ತರ ಕೂಪಗಳಾಗಿದ್ದು. ಕೆಲ ಬಕೇಟ್ ಪತ್ರಕರ್ತರಿಂದಲೇ ಮಹಿಳಾ ಶೋಷಣೆ ಜರುಗುತ್ತಿದೆ, ಮಹಿಳೆಯರ ಸಾಮಾಜಿಕ ಅದೋಗತಿಗೆ ಕೆಲವರು ಸಾಥ್ ನೀಡುತ್ತಿದ್ದು ಇದು ಖಂಡನಾರ್ಹ ಎನ್ನುತ್ತಾರೆ ಮಹಿಳಾ ಹೋರಾಟಗಾರರು.
ಕಾನೂನು ಎಲ್ಲಾ ಜನ ಪ್ರತಿನಿಧಿಗಳೂ ಅನ್ವಯ- ಅಂದರೆ ಸರ್ಕಾರ ಹೊರಡಿಸಿರುವ ಆದೇಶ ಕೇವಲ ಗ್ರಾಮ ಪಂಚಾಯ್ತಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಎಲ್ಲಾ ಸ್ಥಳೀಯ ಅಥವಾ ಎಲ್ಲಾ ಹಂತದ ಜನ ಪ್ರತಿನಿಧಿಗಳಿಗೆ ಅನ್ವಯವಾಗಲಿದೆ, ಸರ್ಕಾರದ ಮಹಿಳಾ ಜನಪ್ರತಿನಿಧಿಗಳಿಗೂ ಅನ್ವಯವಾಗಲಿದೆ. ಎಲ್ಲಾ ಸ್ಥಳೀಯ ಆಡಳಿತಗಳಿಗೂ ಅನ್ವಯವಾಗಲಿದ್ದು, ಪಟ್ಟಣ ಪಂಚಾಯ್ತಿ, ನಗರ ಸಭೆ, ಪುರ ಸಭೆ, ನಗರ ಪಾಲಿಕೆ, ಮಹಾ ನಗರ ಪಾಲಿಕೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಯಾವುದೇ ತರಹದ ಸಾರ್ವಜನಿಕ ಸೇವೆಗಳ ಕೇಂದ್ರಗಳಿಗೆ ಅನ್ವಯ. ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತಾತ್ಮಕ ಕ್ಷೇತ್ರಗಳಲ್ಲಿ, ಆಯ್ಕೆಯಾಗುವ ಸರ್ವ ಮಹಿಳಾ ಸರ್ವ ಸದಸ್ಯರಿಗೆ ಹಾಗೂ ಸರ್ವ ಪದಾಧಿಕಾರಿಗಳಿಗೆ ಕಾನೂನು ಅನ್ವಯವಾಗುತ್ತದೆ ಎಂದು ಕಾನೂನು ತಜ್ಞರು ಸ್ಪಷ್ಟಪಡಿಸಿದ್ದಾರೆ.
ನಾಚಿಕೆ ಗೆಟ್ಟವರ ನಡೆ ಅನಾಗರಿಕತೆಗೆ ಸಾಕ್ಷಿ.!?- ಮಹಿಳಾ ಮೀಸಲಾತಿ ಸಾಕರ ಗೊಳ್ಳಲು ಸಾಥ್ ನೀಡದಿರುವವರು, ನಾಗರೀಕತೆ ಸಮಾಜದಲ್ಲಿ ನಾಚಿಕೆ ಇಲ್ಲದ ನರರು ಎನ್ನ ಬಹುದಾಗಿದೆ ಎಂದು ಹಿರಿಯ ಮಹಿಳಾ ಕಾನೂನು ತಜ್ಞರ ಅಭಿಪ್ರಾಯವಾಗಿದೆ. ಮಹಿಳೆಯರ ಸರ್ವತೋಮುಖ ಏಳ್ಗೆಗಾಗಿ ಮಹಿಳಾ ಮೀಸಲಾತಿ ಜಾರಿಯಾಗಿದೆ, ಆದರೂ ಅದು ಈಡೇರುತ್ತಿಲ್ಲ ಎನ್ನುತ್ತಾರೆ ಮಹಿಳಾ ಪರ ಹೋರಾಟಗಾರರು. ಅದಕ್ಕೆ ಕಾರಣ ಸರ್ಕಾರದ ದಿಟ್ಠನದ ಕಾನೂನು ವ್ಯವಸ್ಥೆ ಜಾರಿಗೆ ತರದಿರುವುದು, ನಂತರದ್ದು ಮಹಿಳಾ ಜನಪ್ರತಿನಿಧಿಗಳ ಹೆಸರಲ್ಲಿ ದರ್ಪತೋರೋ ಪುರುಷ ಪ್ರಧಾನತ್ವವೇ ಕಾರಣವಾಗಲಿದೆ ಎನ್ನತ್ತಾರೆ ಮಹಿಳಾ ವಾದಿಗಳು. ಈ ಮೂಲಕ ಮಹಿಳೆಯರೇ ಸ್ವತಃ ಶೋಷಣೆಗೆ ರಾವೇ ಗುರಿಯಾಗುತ್ತಿದ್ದಾರೆ, ಅವರ ಮಹಿಳೆಯರನ್ನು ಅವರೇ ರಾಜಾ ರೋಷವಾಗಿ ಕಾನೂನು ಬಾಹಿರವಾಗಿ ಶೋಷಣೆಗೆ ಗುರಿಯಾಗಿಸುತ್ತಿದ್ದಾರೆ.
ಹೊಣೆಗೇಡಿ ಭ್ರಷ್ಠ ಅಧಿಕಾರೀಗಳಿಂದಲೇ ಸಾಥ್- ಇದನ್ನು ಪ್ರಜ್ಞಾವಂತರು ಸುಕ್ಷಿತರು ಹಾಗೂ ಸಮಾಜದಲ್ಲಿ, ತಾವೂ ತುಂಬಾ ಸಭ್ಯಸ್ತರು ಪ್ರಭಾವಿಗಳು ಹೋರಾಟಗಾರರು ಎಂಬ ಬಿರುದಾವಳಿಗಳನ್ನು ಹೊತ್ತು ತಿರುಗಾಡುವವರೇ ಹೆಚ್ಚಾಗಿ ಮಾಡುತ್ತಿದ್ದಾರೆ ಎಂದು ಪ್ರಜ್ಞಾವಂತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ಭ್ರಷ್ಟರಿಗೆ ಕೆಲವೆಡೆ ಕೆಲ ಭ್ರಷ್ಟಾ ಅಧಿಕಾರಿಗಳೇ , ಖುದ್ದು ಸಾಥ್ ಕೊಡುತ್ತಿದ್ದಾರೆ ಇದಕ್ಕಿಂತ ನಾಚಿಕೆ ಕಾರ್ಯ ಇನ್ನೇನಿದೆ.!? ಇದಕ್ಕೆ ಮಹಿಳಾ ಪರ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಪುರುಷರ,ಹಾಗೂ ಸಹಕರಿಸುವ ಭ್ರಷ್ಟ ಅಧಿಕಾರಿಗಳ “ಉತ್ತರ ಕುಮಾರ ಪೌರುಷ ನೀತಿ” ಎನ್ನಬಹುದಾಗಿದೆ. ಈ ಮೂಲಕ ಮನೆಯವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಮ್ಮ ಮಹಿಳೆಯರನ್ನು, ತಾವೇ ಶೋಷಣೆ ಮಾಡುತ್ತಾರೆ, ಕಚೇರಿಗಳಲ್ಲಿ ಭ್ರಷ್ಟ ಅಧಿಕಾರಿಗಳು ಅವರಂತೆ ವರ್ತಿಸಿ ಅವರೂ ಮಹಿಳಾ ಶೋಷಣೆ ಸಾಕಾರಗೊಳಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಕೆಲ ಬಕೇಟು ಹಿಡಿಯೋ ಪತ್ರಕರ್ತರು ಹಾಗೂ ಮಾಧ್ಯಮದವರು, ಭ್ರಷ್ಟ ಪುರಷ ಪ್ರಧಾನತ್ವವನ್ನೇ ಸಮರ್ಥನೆ ಮಾಡುತ್ತಿದ್ದಾರೆ ಎಂಬ ಗಂಭಿರ ಆರೋಪವಿದೆ. ಇಂತಹ ಮಾನಗೆಟ್ಟ ಮಹಿಳಾ ವಿರೋಧಿನೀತಿಯಯ ವರದಿಗಾರರಿಗೆ, ಅವರ ಪ್ರಚಾರ ಕೇಂದ್ರದಲ್ಲಿ ಅಥವಾ ಸಂಪಾದಕೀಯ ಕೇಂದ್ರದಲ್ಲಿ ಇಂತಹ ಭ್ರಷ್ಟ ವರದಿಗೆ ಮಾನ್ಯತೆ ನೀಡಲಾಗುತ್ತಿದೆ ಎಂಬ ಗಂಭೀರ ದೂರು ಸಾರ್ವಜನಿಕ ವಲಯದಲ್ಲಿದೆ. ಇದಕ್ಕಿಂತ ಕೀಳಿರಿಮೆ ಮತ್ಯಾವುದಿದೆ, ಜನರಲ್ಲಿ ಪರಿಜ್ಞಾನ ಮೂಡಿಸಬೇಕಿರುವ ಪತ್ರಕರ್ತರು ಹಾಗೂ ಮಾಧ್ಯಮದವರು ಮಹಿಳಾ ಶೋಷಣೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ ಎಂದು ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ.
ಬಕೇಟು ಹಿಡಿಯೋರದ್ದೇ ಬಡಿವಾರ.!?-ಇಂತಹ ಕೆಲವೇ ಕೆಲ ಬಕೇಟು ಹಿಡಿಯೋ ಭ್ರಷ್ಟ ಪತ್ರಕರ್ತರಿಂದಾಗಿ, ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತರು ತಲೆತಗ್ಗಿಸಿ ನಾಚಿಕೆ ಪಡೋ ದುಸ್ಥಿತಿ ಎದುರಾಗಿದೆ ಎನ್ನುತ್ತಾರೆ ಕಾನೂನು ತಜ್ಞರು ಹಾಗೂ ಹಿರಿಯ ಪತ್ರಕರ್ತರು.
ಇದು ಭ್ರಷ್ಟರ ಭಂಡರ ಹಾಗೂ ಪುಡಾರಿಗಳ ಪುಂಡ ಪುರುಷರು, ತಮ್ಮ “ಉತ್ತರ ಕುಮಾರ” ನೀತಿಯನ್ನು ತಾವೇ ಸಾಬೀತು ಪಡಿಸಿಕೊಂಡಿರೋದಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ಮಹಿಳಾ ಹೋರಾಟಗಾರರು. ಇದಕ್ಕಾಗಿ ನಾಗರೀಕ ಸಮಾಜ ಪಶ್ಚಾತ್ತಾಪ ಪಡಬೇಕಿದೆ, ಅಷ್ಟೇ ಅಲ್ಲ ಇಂತಹ “ಉತ್ತರ ಕುಮಾರ ಭ್ರಷ್ಟ ಪುರುಷರಿಗೆ” ಕಾನೂನು ರೀತ್ಯ ತಕ್ಕ ಬುದ್ದಿ ಕಲಿಸುವಂತಾಗಬೇಕಿದೆ. ಅದಕ್ಕಾಗಿ ಸೂಕ್ತ ಸಾಕ್ಷಿ ಪುರಾವೆ, ಆಧಾರ ದಾಖಲುಗಳ ಸಮೇತ ಕಾನೂನು ಸಮರ ನಡೆಸಬೇಕಿದೆ. ಅಂದಾಗ ಮಾತ್ರ ಮಹಿಳಾ ಶೋಷಣೆ ಕಾಣೆಯಾಗಲು ಸಾಧ್ಯ, ಇದಕ್ಕೆ ಮೊಂದಲು ನೊಂದ ಪ್ರಜ್ಞಾವಂತ ಮಹಿಳಾ ಜನಪ್ರತಿನಿಧಿಗಳು ಸಮರ ಸಾರಬೇಕಿದೆ. ಈ ಮೂಲಕ ತಮ್ಮ ಸಹಪಾಟಿಗಳಲ್ಲಿ ಕಾನೂನು ಅರಿವು ಮೂಡಿಸಬೇಕಿದೆ, ಮಹಿಳಾ ಪರ ಹೋರಾಟಗಾರರು ಸಾಥ್ ನೀಡಬೇಕಿದೆ. ಅಂದಾಗಾತ್ರ ಮಹಿಳಾ ಮೀಸಲಾತಿ ಜಾರಿ ಉದ್ದೇಶ ಈ ಡೇರಿದಂತಾಗುತ್ತದೆ, ಕಾನೂನು ಜಾರಿ ತಂದಿರುವುದು ಸಾರ್ಥಕವಾಗಲಿದೆ.
ಉತ್ತರ ಕುಮಾರರ ವಿರುದ್ಧ ಶಿಸ್ಥು ಕ್ರಮ – ಹೆಂಗಸರ ಹೆಸರಲ್ಲಿ ಧರ್ಪ ತೋರೋ ಭಂಡ ಭ್ರಷ್ಠರಿಗೆ, ಕಾನೂನು ರೀತ್ಯ “ಉತ್ತರ ಕುಮಾರರಿಗೆ ತಕ್ಕ ಬುದ್ದಿ ಕಲಿಸಬೇಕಿದೆ. ಆಗ ಮಾತ್ರ ನಿಜವಾದ ಮಹಿಳಾ ಶೋಷಣೆ ನಿಲ್ಲಿದೆ, ಈ ನಿಟ್ಟಿನಲ್ಲಿ ಪ್ರಜ್ಞಾವಂತರು ತಮ್ಮ ಸ್ಪಷ್ಟ ನಿಲುವನ್ನು ಪ್ರಸರ್ಶಿಸಬೇಕು.
ಭ್ರಷ್ಟ “ಉತ್ತರ ಕುಮಾರರ” ವಿರುದ್ಧ ಕಾನೂನು ಸಮರ, ಸೂಕ್ತ ಸಾಕ್ಷ್ಯಾಧಾರ ಗಳ ಸಮೇತ ನಿರಂತರ ನಡೆಯಬೇಕಿದೆ. ಮಹಿಳಾ ಹೋರಾಟಗಾರರು ಕರ್ಥವ್ಯ ಪ್ರಜ್ಞೆ , ಪತ್ರಕರ್ತರು ಹಾಗೂ ಪ್ರಾಮಾಣಿಕತೆ ಮೆರೆಯ ಬೇಕಿದೆ. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು, ಇಂತಹ ಭ್ರಷ್ಟ ಉತ್ತರ ಕುಮಾರರ ಪೌರುಷದ ನಿಜಬಣ್ಣವನ್ನು ಬಯಲಿಗೆಳೆಯ ಧೈರ್ಯ ತೋರಬೇಕಿದೆ. ಅಂದಾಗಾತ್ರ ಭ್ರಷ್ಟ ಉತ್ತರ ಕುಮಾರ ಪೌರುಷಕ್ಕೆ ತಕ್ಕ ಉತ್ತರ ಸಿಗಲಿದೆ, ಮಹಿಳಾ ಶೋಷಣೆ ನಿಲ್ಲಲಿದೆ ಅದಕ್ಕಾಗಿ ಪ್ರತಿಯೊಬ್ಬ ಸ್ವಾಭಿಮಾನಿ ಶೋಷಣೆ ವಿರುದ್ಧ ಹೋರಾಡಬೇಕಿದೆ. ಹಾಗೂ “ಭ್ರಷ್ಟ ಉತ್ತರ ಕುಮಾರ” ನೀತಿಯ ವಿರುದ್ಧ, ಪ್ರತ್ಯಕ್ಷ ವಾಗಿ ಪರೋಕ್ಷವಾಗಿ ನಿರಂತರ ಕಾನೂನು ಸಮರ ಸಾರಬೇಕಿದೆ. ಮಹಿಳಾ ಪರ ಹೋರಾಟಗಾರರೊಂದಿಗೆ ಪ್ರತಿ ಹಂತದ ಹೋರಾಟದಲ್ಲಿ, ಪ್ರಜ್ಞಾವಂತ ಪುರುಷರು ಸಕ್ರೀಯವಾಗಿ ಸಾಥ್ ನೀಡಬೇಕಿದೆ. ಅಂದಾಗ ಮಾತ್ರ ಪ್ರಜ್ಞಾವಂತ ಪರುಷರು, ನಿಜವಾದ ಪೌರುಷ ವಂತರೆನಿಸಿಕೊಳ್ಳಲು ಸಾಧ್ಯ ಎನ್ನುತ್ತಾರೆ ಮಹಿಳಾ ಹೋರಾಟಗಾರರು.
ಶಿಷ್ಟಾಚಾರ ಕಾಣೆಯಗುತ್ತಿದೆ- ಸರ್ಕಾರಿ ಹಾಗೂ ಸರ್ಕಾರದ ಸೌಮ್ಯದ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ. ಇತ್ತೀಚೆಗೆ ಶಿಷ್ಟಾಚರ ಕಾಣೆಯಾಗುತ್ತಿದೆ, ಪ್ರೋಟಕಾಲ್ ಮಾಹವಾಗುತ್ತಿದೆ ಎಂಬ ಕೂಗು ಎಲ್ಲೆಡೆ ಮಾರ್ಧನಿಸುತ್ತಿದೆ. ಇದು ಕೇವಲ ಒಂದು ಗ್ರಾಮ ಪಂಚಾಯ್ತಿ, ಪಟ್ಟಣ ನಗರ ಸಭೇ ಪುರ ಸಭೆಗಳು ಹಾಗೂ ಮಹಾನಗರ ಪಾಲಿಕೆ ಮಾತ್ರವಲ್ಲ. ಕುಗ್ರಾಮದಿಂದ ದೆಹಲಿಯವರೆಗೂ ಜೀವಂತ ವಾಗುರುವ, ಸಾರ್ವತ್ರಿಕವಾಗಿ ಕೇಳುವ ಸಹಜ ಆರೋಪವಾಗಿದೆ. ಇದಕ್ಕೆ ಅಧಿಕಾರಿಗಳು ಸಾಥ್ ನೀಡುತ್ತಿರುವುದು ಖಂಡನಾರ್ಹ, ಕೆಲವೆಡೆಗಳಲ್ಲಿ ಕಾರ್ಯಕ್ರಮದ ವೇದಿಕೆಗಳು ಅಯೋಗ್ಯರ ತಂಗುದಾಣದಂತಾಗಿರುತ್ತವೆ. ಸಂಬಂಧಿಸಿದಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ, ಜಿಲ್ಲಾಢಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಶಿಷ್ಟಚಾರ ಪಾಲನೆಗೆ ಹೆಚ್ಚು ಒತ್ತು ನೀಡಬೇಕಿದೆ, ಈ ನಿಟ್ಟಿನಲ್ಲಿ ಉನ್ನತಾಧಿಕಾರಿಗಳು ಸೂಕ್ತ ನಿರ್ಧೇಶನ ನೀಡಬೇಕಿದೆ. ಕಾರ್ಯಕ್ರಗಳ ವೇದಿಕೆಗಳಲ್ಲಿ ಉನ್ನತಾಧಿಕಾರಿಗಳಿಗೆ, ಗಣ್ಯರಿಗೆ ಹಾಗೂ ಜನಪ್ರತಿನಿಧಿಗಳಿಗಷ್ಟೇ ಆಸನ ನೀಡಿ ಅವಕಾಶ ನೀಡಬೆೇಕಿದೆ. ಈ ಸಂದರ್ಭದಲ್ಲಿ ಸ್ಥಳೀಯ ಆಡಳಿತದ ಜನಪ್ರತಿನಿಧಿಗಳು ತುಂಬಾ ಜವಾಬ್ದಾರಿಯಿಂದ ವರ್ತಿಸಬೇಕಿದೆ, ಸಂಸದರು ಶಾಸಕರು ಹಾಗೂ ಪ್ರಭಾವಿ ಜನಪ್ರತಿನಿಧಿಗಳು ಕಾನೂನು ಪರಿಪಾಲಿಸಬೇಕಿದೆ. ಸಾರ್ವಜನಿಕ ಕಾರ್ಯಕ್ರಮ ಹಾಗೂ ಸಭೆಗಳ ವೇದಿಕೆಯಲ್ಲಿ ಶಿಷ್ಟಾಚಾರಕ್ಕೆ ಹೆಚ್ಚು ಒತ್ತು ಕೊಡಬೇಕಿದೆ, ಅಂದಾಗ ಮಾತ್ರ ವೇದಿಕೆಗೆ ಹೆಚ್ಚು ಗೌರವ ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕಿದೆ. ವಿ.ಜಿ.ವೃಷಭೇಂದ್ರ