ಬಾಗಲಕೋಟ ಜಿಲ್ಲೆಯ ಬಾದಾಮಿ :-ತಾಲೂಕ ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿಯ ಆಫೀಸನಲ್ಲಿ ಸಚಿವರು,ಧೀಮಂತ ನಾಯಕರು, ರೆಬೆಲ್ ರಾಜಕಾರಣಿ ಬಿ, ಶ್ರೀ ರಾಮುಲು ಅವರು ಆಗಮಿಸಿ. ತಾಲೂಕ ಅಧ್ಯಕ್ಷರ ನೇತೃತ್ವದಲ್ಲಿ ಬಾದಾಮಿ ತಾಲೂಕಾ ಹಾಗೂ ಗುಳೇದಗುಡ್ಡ ವಲಯದ ಪಕ್ಷದ ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ಸೇರಿದ್ದರು.
ಸಚಿವರು ಮಾತನಾಡಿ ಡಿಸೇಂಬರ್ 7. ತಾರೀಖು ನನ್ನ ದ್ವಿತೀಯ ಸುಪುತ್ರಿಯ ಮದುವೆ ಇದ್ದು ಎಲ್ಲರೂ ಆಗಮಿಸಿ ಆಶೀರ್ವಾದ ಮಾಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.
ಬಾದಾಮಿಯಲ್ಲಿ ಒಳ್ಳೆ ಕಾರ್ಯಕರ್ತರು ಇದ್ದೀರಾ. ಲೋಕಸಭಾ ಚುನಾವಣೆ ಕುರಿತು ನಾನು ಮತ್ತೊಮ್ಮೆ ಬರುತ್ತೇನೆ. ಗದ್ದಿಗೌಡ್ರನ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಸಪೋರ್ಟ್ ಮಾಡಿ ಗೆಲ್ಲಿಸೋಣ. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನ ಪ್ರಧಾನಮಂತ್ರಿ ಮಾಡೋಣ ಎಂದು ತಿಳಿಸಿದರು.
ಪಟ್ಟಣದ ಲಕ್ಷ್ಮೀ ನಗರಕ್ಕೆ ಪುರಸಭೆ ಸದಸ್ಯರಾದ ಮಹಾಂತೇಶ್ ತಳವಾರ್ ನಮ್ಮ ನಗರಕ್ಕೆ ತಾವು ಬರಲೇಬೇಕು ಎಂದರು. ಕಾರ್ಯಕ್ರಮ ದಲ್ಲಿ ಲಕ್ಷ್ಮೀ ನಗರದ ಹಿರಿಯರು ಬಿ. ಶ್ರೀ ರಾಮುಲು ಅವರಿಗೆ ಶಾಲ್ ಹಾಕಿ ಸನ್ಮಾನ ಮಾಡಿ ಮಹರ್ಷಿ ಹಾಗೂ ಯೋಗಿ ವೇಮನವರ ಭಾವ ಚಿತ್ರ ನೀಡಿ ಸನ್ಮಾನ ಮಾಡಿದರು.
ನಂತರ ಕಾರ್ಯಕ್ರಮ ಕುರಿತು ಮಾತನಾಡಿ ಆಗಮಿಸಿದ ಮಹಿಳೆಯರಿಗೆ ಯುವಕರಿಗೆ ಮದುವೆ ಆಮಂತ್ರಣ ನೀಡಿ ಆಹ್ವಾನ ಕೋರಿದರು.ಈ ಸಂದರ್ಭದಲ್ಲಿ ಹನುಮಂತಪ್ಪ ಕವಳ್ಳಿ ರಾಮಣ್ಣ ಕವಳ್ಳಿ ಹನುಮಂತಪ್ಪ ಸುಳ್ಳದ ಪ್ರಭು ಸುಳ್ಳದ ರಮೇಶ್ ಕಳಸದ ಹಾಗೂ ಲಕ್ಷ್ಮೀ ನಗರದ ಯುವಕರು ಗುರು ಹಿರಿಯರು ಭಾಗಿಯಾಗಿದ್ದರು.
ವರದಿ : ಕೆ. ಎಚ್. ಶಾಂತಗೇರಿ