Join The Telegram | Join The WhatsApp |
ಹಾವೇರಿ : ಕುಡಿದು ಕುಡಿದು ಸತ್ತರು ಅಥವಾ ಹೃದಯಘಾತದಿಂದ ಸತ್ತರು ಆತ್ಮಹತ್ಯೆ ಎಂದು ದೂರು ನೀಡಿದರೆ ಪರಿಹಾರ ಸಿಗುತ್ತದೆ ಎಂಬ ದುರಾಸೆಯ ಸಂಬಂಧಿಕರದ್ದು, ರೈತರು ಇಂದಿನಿಂದ ಅಲ್ಲ ಹಿಂದಿನಿಂದಲೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ರೈತರ ಕುರಿತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ್ ಪಾಟೀಲ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.
ಹಾವೇರಿ ಜಿಲ್ಲೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 2015 ರಲ್ಲಿ ಐದು ಲಕ್ಷ ಪರಿಹಾರ ಕೊಡಲು ಶುರು ಮಾಡಿದ್ದೇವೆ. ಅವತ್ತಿನಿಂದ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ.
ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ವರದಿ ಹೆಚ್ಚಳವಾಗುತ್ತಿದೆ. 2020ನೇ ವರ್ಷದಲ್ಲಿ 500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ರಲ್ಲಿ 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ಆದರೆ ನೀವು ಎಫ್ಐಆರ್ ಪರಿಗಣೆನೆ ತೆಗೆದುಕೊಂಡರೆ ನಿಮ್ಮ ತಪ್ಪು. ರೈತರು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸುಮ್ಮ ಸುಮ್ಮನೆ ಪತ್ರಿಕೆದವರು ಯಾಕೆ ಬರಿಯುತ್ತಿದ್ದಾರೆ ಗೊತ್ತಿಲ್ಲ. ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಇರುತ್ತಾರೆ.
ನೀವೂ ಪರಿಶೀಲನೆ ಮಾಡಿ ಬರೆಯಬೇಕು. ಆತಂಕದ ರೀತಿಯಲ್ಲಿ ವರದಿ ಮಾಡಿದರೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗುತ್ತಿದೆ ಎಂದರು.
ನಾವು 2015 ರಿಂದ 5 ಲಕ್ಷ ಪರಿಹಾರವನ್ನು ನೀಡಲು ಆರಂಭಿಸಿದ್ದೇವೆ. ನಂತರದ ದಿನಗಳಲ್ಲಿ ಆತ್ಮಹತ್ಯೆಗಳು ಹೆಚ್ಚುತ್ತಾ ಹೋದವು. ನಿಜವಾಗಿಯೂ ರೈತರಿಗೆ ಅನ್ಯಾಯವಾಗಿದ್ದರೆ ಪರಿಹಾರ ತಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ.
ಆದರೆ ತಪ್ಪು ವರದಿಗಳಿಂದ ಗಾಬರಿಯಾಗುತ್ತದೆ. ಪರಿಹಾರ ಸಿಗುತ್ತದೆ ಎಂಬ ಕಾರಣಕ್ಕೆ ಆ ರೀತಿ ತಪ್ಪು ವರದಿ ಮಾಡುತ್ತಾರೆ. 2014 ಕ್ಕಿಂತ ಮುಂಚೆ ಹಾಗೂ ೨೦೧೫ ರ ನಂತರ ರೈತರ ಆತ್ಮಹತ್ಯೆಗಳು ಎಷ್ಟು ಆಗಿವೆ ಎಂಬುದನ್ನು ನೀವೇ ನೋಡಿ ಎಂದು ಸಚಿವರು ತಿಳಿಸಿದರು.
Join The Telegram | Join The WhatsApp |