ಅಥಣಿ :-ಬಸ್ ನಿಲ್ದಾಣದಲ್ಲಿ ಕಳವು ಪ್ರಕರಣ ಪತ್ಯೆ ಹಚ್ಚಿದ ಅಥಣಿ ಪೊಲೀಸ್
ಕಳೆದ ಹಲವು ದಿನಗಳಿಂದ ಅಥಣಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಜನದಟ್ಟಣೆ ಇರುವ ಬಸ್ಗಳಲ್ಲಿ ಹತ್ತುವಾಗ ಮಹಿಳೆಯರ ಬ್ಯಾಗ್ ನಿಂದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಪ್ರಕರಣಗಳು ವರದಿಯಾಗಿದ್ದವು.
ಇವುಗಳನ್ನು ಪತ್ತೆ ಹಚ್ಚುವ ಕುರಿತಂತೆ ಬೆಳಗಾವಿಯ ಹೆಚ್ಚುವರಿ ಎಸ್ ಪಿ ಎಮ್ ವೇಣುಗೋಪಾಲ ಇವರು ಮಾರ್ಗದರ್ಶನದಲ್ಲಿ ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ ಅವರ ನೇತೃತ್ವದಲ್ಲಿ, ಅಥಣಿ ಸಿಪಿಐ ರವೀಂದ್ರ ನಾಯ್ಡಡಿ ಅವರ ನಾಯಕತ್ವದಲ್ಲಿ, ಅಪರಾಧ ವಿಭಾಗದ ಅಥಣಿ ಪಿಎಸ್ಐ ರಾಕೇಶ ಬಗಲಿ ಅವರ ಮುಂದಾಳತ್ವದಲ್ಲಿ ಅಥಣಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪಿ ಚ ನಾಯಕ, ಎ ಎ ಈರಕರ, ಎಮ್ ಎ ಪಾಟೀಲ, ಜೆ ಎಚ್ ಡಾಂಗೆ, ಎಮ್ ಎನ್ ಖೋತ, ಶ್ರೀಮತಿ ಜೆ ಆರ್ ಅಸೋದೆ, ಕು. ಸವಿತಾ ಕತ್ತಿ ಮತ್ತು ವಿನೋದ ಠಕ್ಕಣ್ಣವರ ಇವರನ್ನೊಳಗೊಂಡ ತಂಡ ರಚಿಸಲಾಗಿತ್ತು
ಈ ತಂಡವು ಕಳೆದ ದಿನಾಂಕ 04/10/2023 ರಂದು ಅಥಣಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಾಗಿ ಇವರು ಮಹಾರಾಷ್ಟ್ರದ ಸೊಲ್ಲಾಪೂರ ನಗರದ ನಿವಾಸಿಗಳಾಗಿದ್ದು ಇವರು ಕಳೆದ ಹಲವು ತಿಂಗಳಿನಿಂದ ಅಥಣಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಳವು ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ.
ಇವರನ್ನು ಬಂಧಿಸಿ ಅಥಣಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳುವಾಗಿದ್ದ 4 ಪ್ರಕರಣಗಳಲ್ಲಿ ಸರಿ ಸುಮಾರು 6,89,000 ರೂಪಾಯಿ ಮೊತ್ತದ ಬೆಲೆ ಬಾಳುವ ಒಟ್ಟು 100 ಗ್ರಾಂ ತೂಕದ ಬಂಗಾರದ ಅಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಳಗಾವಿಯ ಹೆಚ್ಚುವರಿ ಎಸ್ ಪಿ ಎಮ್ ವೇಣುಗೋಪಾಲ ಇವರು ಪಟ್ಟಣದಲ್ಲಿ ಮಾಧ್ಯಮಗಳಿಗೆ ತಿಳಿಸುತ್ತಾರೆ.
ವರದಿ: ಅಬ್ಬಾಸ ಮುಲ್ಲಾ.