Join The Telegram | Join The WhatsApp |
ಬಾಗಲಕೋಟೆ: ಬಾಗಲಕೋಟೆ ನಗರದ ಶೀಗಿಕೇರಿ ಕ್ರಾಸ್ ಬಳಿ ಸೇತುವೆ ಕೆಳಗಡೆ ಯುವತಿಯೊಬ್ಬರ ಶವ ಶನಿವಾರ ಪತ್ತೆಯಾಗಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಸುಮನ್ ಪತ್ತಾರ (26) ಎಂಬವರು ಮೃತ ಯುವತಿಯಾಗಿದ್ದಾರೆ.
ಮೃತ ಯುವತಿ ಕುಮಾರೇಶ್ವರ ಮೆಡಿಕಲ್ ಕಾಲೇಜ್‌ನಲ್ಲಿ ಪಿಜಿಯೋಥರೆಪಿ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಅವರ ಶವ ಶೀಗೀ ಕ್ರಾಸ್ ಬಳಿಯ ಸೇತುವೆ ಕೆಳಗಡೆ ಪತ್ತೆಯಾಗಿದೆ. ಮೇಲಿಂದ ಹಾರಿ ಬಿದ್ದ ಸ್ಥಿತಿಯಲ್ಲಿರುವ ಶವವನ್ನು ಇರುವೆಗಳು ಮುತ್ತಿಕೊಂಡಿವೆ.
ಸುಮನ್ ಪತ್ತಾರ್ ಅವರು ಶುಕ್ರವಾರ ಬೆಳಗ್ಗೆ 7 ಗಂಟೆಗೆ ಹಾಸ್ಟೆಲ್‌ನಿಂದ ಹೊರಬಂದ ಬಗ್ಗೆ ಮಾಹಿತಿ ಇದ್ದು ನಂತರ ನಾಪತ್ತೆಯಾಗಿದ್ದರು. ಈ ಬಗ್ಗೆ ನವನಗರದ ಮಹಿಳಾ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿತ್ತು. ಪೊಲೀಸರು ಮತ್ತು ಇತರರು ಹಲವಾರು ಕಡೆಗಳಲ್ಲಿ ಹುಡುಕಿದ್ದರು. ಇದೀಗ ಅವರ ಶವ ಸೇತುವೆ ಕೆಳಗಡೆ ಸಿಕ್ಕಿದೆ.
ಪೋಲಿಸರು ಮೃತ ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತಿದ್ದು, ಇದು ಆತ್ಮಹತ್ಯೆಯೇ? ಕೊಲೆಯೇ? ಏನು ಕಾರಣ ಎಂಬಿತ್ಯಾದಿ ವಿಚಾರಗಳನ್ನು ಪತ್ತೆ ಹಚ್ಚುವ ಕೆಲಸ ನಡೆಯುತಿದೆ.
Join The Telegram | Join The WhatsApp |