Ad imageAd image
- Advertisement -  - Advertisement -  - Advertisement - 

ಬಿಜೆಪಿ ಪಕ್ಷದ ಕೇಂದ್ರ ಸರಕಾರ ಮೂರು ಕರಾಳ ಕಾನೂನನ್ನು ಜಾರಿಗೆ ತರುವ ಮೂಲಕ ರೈತರಿಗೆ ಅನ್ಯಾಯ ವಾಗಿದೆ.

Bharath Vaibhav
ಬಿಜೆಪಿ ಪಕ್ಷದ ಕೇಂದ್ರ ಸರಕಾರ ಮೂರು ಕರಾಳ ಕಾನೂನನ್ನು ಜಾರಿಗೆ ತರುವ ಮೂಲಕ ರೈತರಿಗೆ ಅನ್ಯಾಯ ವಾಗಿದೆ.
WhatsApp Group Join Now
Telegram Group Join Now

ನಿಪ್ಪಾಣಿ:-  ಹಲವು ಮುಗ್ಧ ರೈತರು ಪ್ರಾಣ ಕಳೆದುಕೊಂಡಿದ್ದಾರೆ, ರೈತರ ವಿವಿದ ಸಮಸ್ಯೆಗಳನ್ನು ಎದುರಿಸಲು ಬಗೆಹರಿಸಿ ಪರಿಹಾರವನ್ನು ನೀಡುವ ಸಲುವಾಗಿ ಸರ್ವ ಸಾಮಾನ್ಯ ವ್ಯಕ್ತಿ ಪೂರ್ವ ಐಎಎಸ್ ಅಧಿಕಾರಿ ಶ್ರೀ ಶಂಭು ಕಲ್ಲೋಳಿಕರ್ ನಮ್ಮ ಮುಂದೆ ಇದ್ದಾರೆ .

 

ಕರ್ನಾಟಕ ರಾಜ್ಯ ರೈತ ಅಸೋಸಿಯೇಷನ್ ​​ಮಾಧ್ಯಮದವರೊಂದಿಗೆ ಮಾತನಾಡಿ, ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಲು ನಿರ್ಧರಿಸಿದ್ದು, ಶಂಭು ಕಲ್ಲೋಳಿಕರ್ ಅವರಿಗೆ ರೈತ ಅಸೋಸಿಯೇಷನ್ ​​ಬೆಂಬಲ ಘೋಷಿಸಿದೆ.

ಮುಂದೆ ಮಾತನಾಡಿದ ರಾಜು ಪವಾರ್ ಸ್ವಜನ ಪಕ್ಷಪಾತ, ಬಂಡವಾಳಶಾಹಿ ಪದ್ಧತಿ ನಾಶ ಮಾಡಲು ಶಂಭು ಕಲ್ಲೋಳಿಕರ ಅವರನ್ನು ಅದ್ಧೂರಿ ಮತದಿಂದ ಆಯ್ಕೆ ಮಾಡಬೇಕೆಂದು ಕರೆ ನೀಡಿದ ರಾಜು ಪವಾರ್, ಕಬ್ಬು, ಸೋಯಾಬಿನ್, ತಂಬಾಕು ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗದೆ ಸುಳ್ಳು ಭರಸೆಗಳನ್ನು ಈ ಬಿಜೆಪಿ ಪಕ್ಷದ ಕೇಂದ್ರ ಸರಕಾರ ರೈತರಿಗೆ ಸದಾ ಅನ್ಯಾಯ ಮಾಡುತ್ತಿದೆ ಎಂದರು.

ಪ್ರಜಾಪ್ರಭುತ್ವದಲ್ಲಿ ಜನ ಸಾಮಾನ್ಯರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದು ನಮ್ಮ ಅದೃಷ್ಟ ಚೆನ್ನಾಗಿದೆ ಮುಂದಿನ ದಿನಗಳಲ್ಲಿ ನಮ್ಮ ರೈತರ ವಿವಿದ ರೀತಿಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಅವುಗಳಿಗೆ ಪರಿಹಾರ ಒದಗಿಸಿಕೊಳ್ಳಲು ಹಾಗೂ ಇನ್ನುಳಿದ ನಮ್ಮ ಭಾಗದ ಜನತೆಯ ವಿವಿಧ ಯೋಜನೆಗಳ ಬಗ್ಗೆ ಚರ್ಚೆ ಮಾಡಿ ಅವುಗಳನ್ನು ಜಾರಿಗೆ ತರಲು ಲೋಕಸಭೆಯಲ್ಲಿ ನಮ್ಮ ಪರವಾಗಿ ಧ್ವನಿ ಎತ್ತಿ ಎಲ್ಲಾ ಜನರ ಹಲವಾರು ಕೆಲಸ ಕಾರ್ಯಗಳನ್ನು ಮಾಡಲು ಇವರು ಯೋಗ್ಯವಾದ ವ್ಯಕ್ತಿ ಸಿಕ್ಕಿದ್ದಾರೆ ಇವರಿಗೆ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ಹಾಗು ಇವರ ಚಿಹ್ನೆ ಗುರುತು 16 ನಂಬರ್ ಆಟೋ ರಿಕ್ಷಾ ಗೆ ಬಟನ ಒತ್ತಿ ಮೇ 7 ರಂದು ಮತದಾನ ಮಾಡಬೇಕೆಂದು ಕಳ ಕಳೀಯಿಂದ ಸಾರ್ವಜನಿಕರಲ್ಲಿ ವಿನಂತಿಸಿ ಕೊಂಡರು .

ನಂತರ ಮೆರವಣಿಗೆ ಮೂಲಕ ನಿಪ್ಪಾಣಿ ಜಾತ್ತ್ರಾಟ ವೇಸ್ ಬಸ್ ಸ್ಟ್ಯಾಂಡ್ ಸರ್ಕಲ್ ಚನ್ನಮ ಸರ್ಕಲ್ ಹಾಗೂ ಪುರಸಭೆಯ ಅಂಬೇಡ್ಕರ್ ಪುತ್ತಳಿಗೆ ಹಾರು ಹಾಕುವ ಮೂಲಕ ಈ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

ಈ ಸಂದರ್ಭದಲ್ಲಿ ಶಿವಾಜಿ ಮಾನೆ ಸಂಭಾಜಿ ಪಾಟೀಲ್, ಕಿಸಾನ್ ನಂದಿ, ಸಂಜಯ ನಾಯ್ಕ, ಸರ್ಜೇರಾವ್ ಹೆಗಡೆ, ಪ್ರಕಾಶ್ ನಾಯಕ್, ನಾರಾಯಣ ಚವ್ಹಾಣ ,ಉತ್ತಮ ಮಾಡೆಕರ, ಶೀತಲ್ ಕಾಂಬಳೆ ,ನಾಮದೇವ ಸಾಳುಂಖೆ ,ತಾನಾಜಿ ಪಾಟೀಲ್ ,ಬಾಬಾಸಾಹೇಬ ಪಾಟೀಲ್, ಕಲ್ಗೊಂಡ ಕೋಟಗೆ ,ಕುಮಾರ ಪಾಟೀಲ್ ,ಸುರೇಶ ಗಾಡಿವಡ್ಡರ, ಈರಣ್ಣ ಪಾಟೀಲ್, ಸೇರಿದಂತೆ ರೈತ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ರಾಜು ಮುಂಡೆ 

 

WhatsApp Group Join Now
Telegram Group Join Now
Share This Article
error: Content is protected !!