Join The Telegram | Join The WhatsApp |
ಬೆಂಗಳೂರು: ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ 40% ಕಮಿಷನ್ ಆರೋಪ ಮಾಡಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇದೀಗ ವಿರೋಧ ಪಕ್ಷ ಕಾಂಗ್ರೆಸ್ ಇದನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಸಿಎಂ ಎಂಬ ಕ್ಯೂಆರ್ ಕೋಡ್ ಅಭಿಯಾನವನ್ನು ಹಮ್ಮಿಕೊಂಡಿದೆ.
ಹೌದು…ಕ್ಯೂಆರ್ ಕೋಡ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫೋಟೋ ಹಾಕಿ PayCM ಎಂಬ ಪೋಸ್ಟರ್ ಮಾಡಿದ್ದು, ಈ 40% ಕಮಿಷನ್ ಪೋಸ್ಟರ್‌ನ್ನು ಬೆಂಗಳೂರು ತುಂಬಾ ಹಾಕಿದೆ. ಇದಕ್ಕೆ ಬಿಜೆಪಿ ಸಹ ಕಾಂಗ್ರೆಸ್ ತಿರುಗೇಟು ನೋಡಿದೆ.
Join The Telegram | Join The WhatsApp |