Join The Telegram | Join The WhatsApp |
ಬೆಳಗಾವಿ : ಶನಿವಾರ ದಿನಾಂಕ 26ರ ನವೆಂಬರಿನಂದು ನಗರದ ಅಂಬೇಡ್ಕರ ಉದ್ಯಾನವನದಲ್ಲಿ ಸಮಾಜದ ಮುಖಂಡರು ಹಾಗೂ ಯುವಕರೊಂದಿಗೆ ಭಾರತದ ಸಂವಿಧಾನದ ಅರ್ಪಣಾ ದಿನಾಚರಣೆಯನ್ನು ಆಚರಣೆ ಮಾಡಿ, ಈ ಮೇಲಿನಂತೆ ಹೇಳಿಕೆ ನೀಡಿದ್ದಾರೆ..
ಬಾಬಾಸಾಹೇಬ ಅವರು ಬರೆದಂತಹ ಸಂವಿಧಾನವನ್ನು ಭಾರತೀಯರಾದ ನಾವೆಲ್ಲಾ ನಮಗೆ ನಾವೇ ಅರ್ಪಣೆ ಮಾಡಿಕೊಂಡ ವಿಶೇಷ ದಿನವಾದ ಇಂದು ಎಲ್ಲಾ ಭಾರತೀಯರಿಗೆ ಈ ದಿನದ ಶುಭಾಶಯ ತಿಳಿಸಿದರು…
ಈಗಿನ ರಾಜಕೀಯ ಪರಿಸ್ಥಿತಿ ಹಾಗೂ ಸಂವಿಧಾನದ ಬಗ್ಗೆ ಕೆಲವರು ನೀಡುತ್ತಿರುವ ಹೇಳಿಕೆ ವಿರುದ್ಧ ಖಾರವಾಗಿ ಮಾತನಾಡಿದ ಅವರು, ಒಂದು ವೇಳೆ ಅಂಬೇಡ್ಕರ ಅವರ ವಿಚಾರಧಾರೆಗೆ ಹಾಗೂ ಸಂವಿಧಾನಕ್ಕೆ ಸ್ವಲ್ಪ ಚ್ಯುತಿ ಬಂದರೂ ಉಗ್ರವಾದ ಹೋರಾಟ ಆಗುತ್ತೆ, ಸಂವಿಧಾನದ ಬಗ್ಗೆ ಲಘುವಾಗಿ ಮಾತನಾಡುವಂತ ಕೀಳುಮಟ್ಟದ ವಿಚಾರ ಯಾರೂ ಮಾಡಬಾರದು ಎಂದು ಚಾಟಿ ಬೀಸಿದರು..
ಇನ್ನು ಈ ವೇಳೆ ಸಮಾಜದ ಅನೇಕ ಮುಖಂಡರು, ದಲಿತ ಸಂಘಗಳ ನಾಯಕರು ಹಾಗೂ ಹೋರಾಟಗಾರರಾದ ಮಲ್ಲೇಶ ಚೌಗುಲೆ, ದುರ್ಗೇಶ ಮೇತ್ರಿ, ನಂದಿ, ಸಮುದಾಯದ ನಗರ ಸೇವಕರುಮಂಜುನಾಥ್ ಕಾಂಬಳೆ, ಯುವ ಹೋರಾಟಗಾರ ಮಹೇಶ ಸಿಗಿಹಳ್ಳಿ, ಯಲ್ಲಪ್ಪ, ಇನ್ನೂ ಮುಂತಾದ ಸಮಾನ ಮನಸ್ಕರರು ಉಪಸ್ಥಿತರಿದ್ದರು..
ವರದಿ : ಪ್ರಕಾಶ ಕುರಗುಂದ
Join The Telegram | Join The WhatsApp |