Join The Telegram | Join The WhatsApp |
ಧಾರವಾಡ : ಹಲವಾರು ದಿನಗಳಿಂದ ಕಲಘಟಗಿ ತಾಲೂಕಿನ ಹಲವಾರು ರೈತರಿಗೆ ಕಾಡುತ್ತಿದ್ದ ಸಮಸ್ಯೆಯು ಇಂದು ಮುಕ್ತಿ ಹೊಂದಿದಂತಾಗಿದೆ.
ಹಲವಾರು ವಾರಗಳಿಂದ ಕಬ್ಬು ಸಾಗಾಣಿಕೆ ಬಗ್ಗೆ ತಾಲೂಕಿನಲ್ಲಿ ಹೋರಾಟ ನಡೆಯುತ್ತಿತ್ತು ಇದನ್ನು ಗಮನಿಸಿದ ಸ್ಥಳೀಯ ಶಾಸಕರಾದ ಸಿ ಎಂ ನಿಂಬಣ್ಣವರ್ ಅವರು ಇಂದು ತಾಲೂಕಿನ ಹಲವಾರು ರೈತ ಮುಖಂಡರೊಂದಿಗೆ ಮುರುಗೇಶ್ ನಿರಾಣಿ ಅವರ ಸಕ್ಕರೆ ಕಾರ್ಖಾನೆಗೆ ತೆರಳಿ ರೈತರ ಸಮಸ್ಯೆಯಾದ ಕಬ್ಬು ಸಾಗಾಣಿಕೆಯ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಮಾತನಾಡಿದ ಕಾರ್ಖಾನೆಯವರು ನವೆಂಬರ್ 15 ರ ನಂತರ ಕಲಘಟಗಿ ತಾಲೂಕಿನ ಎಲ್ಲಾ ಕಬ್ಬನ್ನು ನಮ್ಮ ಕಾರ್ಖಾನೆಗೆ ಕಳುಹಿಸಿ ಎಂದು ಸೂಚಿಸಿದರು.
ಹಾಗೂ ಶಾಸಕರಾದ ಸಿ ಎಂ ನಿಂಬಣ್ಣವರ್ ಮತ್ತು ತಾಲೂಕಿನ ರೈತ ಮುಖಂಡರು ಖುಷಿಯಿಂದ ತಾಲೂಕಿನ ತೆರಳಿದರು.
ಸಂಧರ್ಭದಲ್ಲಿ ತಾಲ್ಲೂಕಿನ ಯುವ ಮುಖಂಡರಾದ ಶಶಿಧರ ನಿಂಬಣ್ಣವರ, ಬಸವರಾಜ ಶೆರೆವಾಡ, ಸುರೇಶ ಸಿಲವಂತರ, ಮಹಾಂತೇಶ ಹೆಂಬಲಿ, ಪರಶುರಾಮ್ ಹುಲಿಹೋಂಡ ಹಾಗೂ ತಾಲೂಕಿನ ಎಲ್ಲಾ ರೈತ ಮುಖಂಡರು ಉಪಸ್ಥಿತರಿದ್ದರು
ವರದಿ: ವಿನಾಯಕ ಗುಡ್ಡದಕೇರಿ
Join The Telegram | Join The WhatsApp |